ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐತಿಹಾಸಿಕ ತಾಣಗಳ ಅಭಿವೃದ್ದಿಗೆ ಯೋಜನೆ: ಶಾಸಕ ಪರಣ್ಣ ಮುನವಳ್ಳಿ

ಆನೆಗೊಂದಿ ಪುಷ್ಕರಣಿ ಉದ್ಘಾಟನೆ
Last Updated 15 ಜನವರಿ 2022, 8:47 IST
ಅಕ್ಷರ ಗಾತ್ರ

ಗಂಗಾವತಿ: ವಿಜಯನಗರ ಸಾಮ್ಯಾಜ್ಯ ಕಾಲದ ಐತಿಹಾಸಿಕ ಸ್ನಾನಘಟ್ಟದ ಪುಷ್ಕರಣಿಯನ್ನು ನರೇಗಾ ಅಡಿ ಅಭಿವೃದ್ದಿಪಡಿಸಿದ ಜಿ.ಪಂ ಮತ್ತು ತಾ.ಪಂ, ಗ್ರಾ.ಪಂ ಅಧಿಕಾರಿಗಳ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ತಾಲ್ಲೂಕಿನ ಆನೆಗೊಂದಿ ಸಮೀಪದ ದುರ್ಗಾದೇವಿ ದೇವಸ್ಥಾನ ಹಿಂಬದಿಯಲ್ಲಿನ ಪುಷ್ಕರಣಿಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಅಂಜನಾದ್ರಿ,ಪಂಪಾ ಸರೋವರ, ಹನುಮನಹಳ್ಳಿ, ಚಿಕ್ಕರಾಂಪುರ, ಆನೆಗೊಂದಿ ಭಾಗದಲ್ಲಿ ವಿಜಯನಗರ ಕಾಲದ ಸಂಬಂಧಪಟ್ಟ ಐತಿಹಾಸಿಕ ಕುರುಹುಗಳು ಸಾಕಷ್ಟಿದ್ದು, ಅವುಗಳನ್ನು ಪತ್ತೆ ಹಚ್ಚಿ ಅವುಗಳ ಅಭಿವೃದ್ದಿಗೆ ಪಣತೊಡಬೇಕು ಎಂದರು.

ಜಿ.ಪಂ.ಸಿಇಒ ಫೌಜಿಯಾ ತರುನ್ನುಮ್ ಮಾತನಾಡಿ, ಇದೇ ಮಾದರಿಯಲ್ಲಿ ನೀರಿನ ಸಂರಕ್ಷಣೆ ಕಾಮಗಾರಿಗಳು ಮತ್ತು ಶಾಶ್ವತ ಆಸ್ತಿಗಳು ಎಲ್ಲೆಲ್ಲಿ ಸ್ಥಾಪನೆ ಮಾಡಬಹುದು ಎಂಬುದನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದರು

ದೇವಸ್ಥಾನದ ರಾಜನ್ನಸ್ವಾಮಿ ಮಾತನಾಡಿ, ಇತಿಹಾಸದ ಪ್ರಕಾರ ಈಗಿನ ಪುಷ್ಕರಣಿ, ಅಂದಿನ ನಾಗಕನ್ನೆಯರ ಸ್ನಾನ ಗೃಹವಾಗಿತ್ತು. ಸದ್ಯ ಇದರ ಪಕ್ಕ ರಾಶಿ ವನ, ನಕ್ಷತ್ರವನ, ಸರಸ್ವತಿವನ, ದುರ್ಗಾವನ ಎಂದು ಹೆಸರಿಸಿ, ಇಲ್ಲಿ ಆಯುರ್ವೇದ ಮರಗಳು ಬೆಳೆಸಲಾಗಿದೆ. ಹಾಗೇಯೆ ಇಲ್ಲಿ ವಾಲಿಕಿಲ್ಲಾ, ಮಹಾಶಕ್ತಿ ಗಣಪತಿ, ನವಾಗ್ರಹ ಸೇರಿದಂತೆ 12 ಎತ್ತರ ಹುತ್ತ ಇದ್ದು ಇಲ್ಲಿ ಸಾಧು, ಸಂತರು ತಪಸ್ಸು ಮಾಡಲಾಗುತ್ತಿದ್ದರು ಎಂದು ರಾಮಾಯಣ ಹೇಳುತ್ತದೆ ಎಂದರು.

ಇದಕ್ಕೂ ಮುನ್ನ ಪುಷ್ಕರಣಿಯ ಸುತ್ತ ಗ್ರೀಲ್ ಗಳಿಗೆ ಬಾಳೆ ತೋರಣ, ತಾಳೆ ಎಲೆ ಕಟ್ಟಿ ಸಿಂಗರಿಸಲಾಗಿತ್ತು. ನಂತರ ದೇಗುಲದ ಬ್ರಹ್ಮಾನಂದ ಸ್ವಾಮೀಜಿ ನೇತೃತ್ವದಲ್ಲಿ ಕಲ್ಯಾಣಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ನಂತರ ಗಂಗಾ ಪೂಜೆ ಮಾಡುವ ಮೂಲಕ ಪುನಶ್ಚೇತನಗೊಂಡ ಕಲ್ಯಾಣಿಯನ್ನುಉದ್ಘಾಟಿಸಲಾಯಿತು. ನಂತರ ದೇವಸ್ಥಾನ ಕಮೀಟಿ ವತಿಯಿಂದ ಶಾಸಕ, ಸಿಇಓ, ಇಒ, ಎಂಜಿನಿಯರ್ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆ ತಾ.ಪಂ ಇಓ ಡಾ.ಡಿ.ಮೋಹನ್, ಆನೆಗೊಂದಿ ರಾಜವಂಶಸ್ಥ ರಾಜ ಕೃಷ್ಣದೇವರಾಯ, ತಾಂತ್ರಿಕ ಸಂಯೋಜಕ ವಿಶ್ವನಾಥ, ತಾಂತ್ರಿಕ ಸಹಾಯಕ ಶಿವಪ್ರಸಾದ್, ಗ್ರಾ.ಪಂ ಅಧ್ಯಕ್ಷ ತಿಮ್ಮಣ್ಣ ಬಾಳೆಕಾಯಿ, ಪಿಡಿಒ ಕೃಷ್ಣಪ್ಪ, ಗ್ರಾ.ಪಂ ಸದಸ್ಯಾರದ ಸುಶೀಲಾಬಾಯಿ, ಕೆವಿ ಬಾಬು, ನರಸಿಂಹ, ಶಾರದಾಬಾಯಿ, ಮಲ್ಲಿಕಾರ್ಜುನ ಸ್ವಾಮಿ, ಗಾಳೆಮ್ಮ, ಹೊನ್ನಪ್ಪ, ಎಸ್.ಕಿರಣ್ಮಯಿ,ವೆಂಕಟೇಶ, ಸಣ್ಣ ಫಕೀರಪ್ಪ, ತಾ.ಪಂ ಸಂಯೋಜಕ ಕೆ.ಶಿವಕುಮಾರ, ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT