7
ಜಿಲ್ಲಾಧಿಕಾರಿ ಸೂಚನೆ

ಶಾಲಾ ಶುಲ್ಕ ವಿವರ ಪ್ರದರ್ಶಿಸಲು ಸೂಚನೆ

Published:
Updated:
ಎಂ.ಕನಗವಲ್ಲಿ

ಕೊಪ್ಪಳ: ‘ಜಿಲ್ಲೆಯಲ್ಲಿ ಖಾಸಗಿ ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ತಾವು ಪಡೆಯುವ ಶುಲ್ಕದ ವಿವರವನ್ನು ಶಾಲೆಯ ಗೋಡೆ ಮೇಲೆ ಬರೆಯಿಸಬೇಕು ಮತ್ತು ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಈ ಕಾರ್ಯ ಮೂರು ದಿನಗಳ ಒಳಗೆ ಆಗಬೇಕು’ ಎಂದು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ಶಾಲೆಗಳಲ್ಲಿ ಶುಲ್ಕದ ವಿವರವನ್ನು ಇದುವರೆಗೂ ಪ್ರದರ್ಶಿಸದ ಶಾಲಾ ಮುಖ್ಯಸ್ಥರೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.  ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲ ಖಾಸಗಿ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ರಾಜ್ಯ ಪಠ್ಯಕ್ರಮ, ಸಿಬಿಎಸ್ಇ ಮತ್ತು ಐಸಿಎಸ್‌ಸಿ ಪಠ್ಯಕ್ರಮ ಅನುಸರಿಸುತ್ತಿರುವ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನಿಗದಿಪಡಿಸಿರುವ ಶುಲ್ಕದ ವಿವರಗಳನ್ನು ಶಾಲಾ ಸೂಚನಾ ಫಲಕದಲ್ಲಿ ಸಾರ್ವಜನಿಕವಾಗಿ ಪ್ರಕಟಿಸದೆ, ಸರ್ಕಾರದ ಶುಲ್ಕ ನೀತಿಯನ್ನು ಜಿಲ್ಲೆಯಲ್ಲಿ ಒಟ್ಟು 39 ಶಾಲೆಗಳು ಉಲ್ಲಂಘಿಸಿವೆ. ಅಂತಹ ಶಾಲೆಗಳು, ಶುಲ್ಕದ ವಿವರವನ್ನು ಶಾಲೆಯ ಗೋಡೆ ಮೇಲೆ ಬರೆಯಿಸಬೇಕು ಮತ್ತು ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಇದಕ್ಕೆ ಮೂರು ದಿನಗಳ ಗಡುವು ನೀಡಲಾಗಿದೆ ಎಂದರು.

ಮೂರು ದಿನಗಳ ಒಳಗೆ ಈ ಕುರಿತು ಭಾವಚಿತ್ರ ಸಹಿತ ವರದಿಯನ್ನು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಲ್ಲಿಸಬೇಕು. ಸಭೆಗೆ ಗೈರು ಹಾಜರಾದ 9 ಶಾಲೆಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ, ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಶಾಲೆಯವರು ನಿಯಮ ಬಾಹಿರವಾಗಿ ಶುಲ್ಕ ಸಂಗ್ರಹ ಮಾಡಿ, ಸರ್ಕಾರದ ಶುಲ್ಕ ನೀತಿ ಉಲ್ಲಂಘಿಸಿದಲ್ಲಿ, ಅಂತಹ ದೂರುಗಳ ಕುರಿತು, ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ವರದಿಯೊಂದಿಗೆ ಜಿಲ್ಲಾ ಶೈಕ್ಷಣಿಕ ಕ್ರಮಬದ್ಧತಾ ಪ್ರಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳಿಗೆ ಕ್ರಮಕ್ಕಾಗಿ ಶಿಫಾರಸು ಮಾಡಬೇಕು ಎಂದು ಅವರು ತಾಕೀತು ಮಾಡಿದರು.

ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಶ್ಯಾಮಸುಂದರ್, ಜಿಲ್ಲಾ ನೋಡಲ್ ಅಧಿಕಾರಿ ಎಂ.ಬಡದಾನಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !