ಗಂಗಾವತಿ: ‘ಕರ್ನಾಟಕ ಇತಿಹಾಸದಲ್ಲಿ ಗಂಡುಗಲಿ ಕುಮಾರರಾಮ ಅಚ್ಚಳಿಯದ ಛಾಪನ್ನು ಮೂಡಿಸಿದ್ದಾನೆ‘ ಎಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲಾ ಅವರು ಹೇಳಿದರು.

ನಗರದ ಐಎಂಐ ಭವನದಲ್ಲಿ ಸಂಕಲ್ಪ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಹಾಗೂ ಅಕ್ಕ ಮಹಾದೇವಿ ಮಹಿಳಾ ವಿವಿ ವಿಜಯಪುರ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಗಂಡುಗಲಿ ಕುಮಾರರಾಮ ಆರ್ದಶ ವ್ಯಕ್ತಿತ್ವ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಾಷ್ಟ್ರೀಯ ಮತ್ತು ಪ್ರಾದೇಶಿಕ ಪ್ರಸ್ತುತತೆಯ ಪ್ರಸ್ತುತ ವಿಷಯದ ಬಗ್ಗೆ ವಿಚಾರ ಸಂಕಿರಣ ನಡೆಯಬೇಕು. ಸಂಶೋಧಕರು ಮತ್ತು ಶಿಕ್ಷಣ ತಜ್ಞರಿಗೆ ತಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಇಂತಹ ರಾಷ್ಟ್ರೀಯ ವಿಚಾರ ಸಂಕಿರಣ ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ‘ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಂತರ ಕೆಎಸ್.ಸಿ ಮಹಿಳಾ ಕಾಲೇಜಿನ ಪ್ರಾರ್ಚಾಯ ಡಾ.ಶರಣಪ್ಪ ಕೋಲ್ಕಾರ್, ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು ಮಾತನಾಡಿದರು.

ಇದೇ ವೇಳೆ ‘ನಮ್ಮ ನೆಲೆ-ಸಂಸ್ಕೃತಿ‘ ಎಂಬ ಕೃತಿಯನ್ನು ಗಣ್ಯರು ಬಿಡುಗಡೆಗೊಳಿಸಿದರು.

ಅಕ್ಕ ಮಹಾದೇವಿ ವಿವಿಯ ಸಿಂಡಿಕೇಟ್ ಸದಸ್ಯ ಕರಿಗೂಳಿ, ಸಂಕಲ್ಪ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷ ಹೇಮತರಾಜ್ ಜಿ.ಕಲ್ಮಂಗಿ, ಕಾರ್ಯಾಧ್ಯಕ್ಷ ನಾಗರಾಜ್ ಗುತ್ತೆದಾರ, ಉಪಾಧ್ಯಕ್ಷ ಡಾ.ಎಂ.ಆರ್.ಮಂಜುಸ್ವಾಮಿ, ಬಸವರಾಜ್ ಕೇಸರಹಟ್ಟಿ, ಮಲ್ಲಿಕಾರ್ಜುನ ಸಿಂಗನಾಳ, ಅಮೀತ್ ಕುಮಾರ್ ರೆಡ್ಡಿ, ಪ್ರಾರ್ಚಾಯ ಬಸಪ್ಪ ಶಿರಿಗೇರಿ, ಉಪನ್ಯಾಸಕರಾದ ಡಾ.ಪಂಡರಿನಾಥ ಅಗ್ನಿಹೋತ್ರಿ, ರಾಜೇಶ ನಾಯಕ ಹಾಗೂ ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.