ಮೆರವಣಿಗೆ; ಕಲಾ ತಂಡಗಳ ಮೆರಗು
ಗ್ರಾಮ ದೇವತೆ ದ್ಯಾಮಮ್ಮದೇವಿ ಜಾತ್ರಾ ಮಹೋತ್ಸವ ನಿಮಿತ್ಯ ಬೆಳಿಗ್ಗೆ ವಿಶೇಷ ಪೂಜೆ ಮಹಿಳೆಯರ ಕುಂಭ ಮೆರವಣಿಗೆ ಹಾಗೂ ಗಂಗಾಪೂಜೆ ನಡೆಯಿತು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಹಾಗೂ ವಾದ್ಯ ಮೇಳಗಳು ಗಮನ ಸೆಳೆದವು. ಮಧ್ಯಾಹ್ನ ಉಡಿ ತುಂಬುವ ಕಾರ್ಯಕ್ರಮ ಹಾಗೂ ಜಗದಯ್ಯ ಸಾಲಿಮಠ ಮತ್ತು ಮಹೇಶ ತಳವಾರ ಅವರ ತಂಡದ ವತಿಯಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.