ಹನುಮಸಾಗರ: ಇಲ್ಲಿ ಜರುಗಿದ 11ನೇ ರಾಜ್ಯ ಪೆಂಕಾಕ್ ಸಿಲಾತ್ ಚಾಂಪಿಯನ್ಶಿಪ್ನಲ್ಲಿ ಕೊಪ್ಪಳದ ಗೊಂಡಬಾಳ ಸಹೋದರಿಯರು ತಲಾ ಎರಡು ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದಾರೆ.

ಇಲ್ಲಿನ ಚೈತನ್ಯ ಗ್ರೂಪ್ನ ಸ್ವಾಮಿ ವಿವೇಕಾನಂದ ವಿಜ್ಞಾನ ಕಾಲೇಜಿನ ದ್ವೀತಿಯ ಪಿಯು ವಿದ್ಯಾರ್ಥಿನಿ ಸಾಹಿತ್ಯ ಎಂ. ಗೊಂಡಬಾಳ ಅವರು ಜೂನಿಯರ್ ವಿಭಾಗದ (63-67 ಕೆಜಿ)ಯಲ್ಲಿ ಟ್ಯಾಂಡಿಂಗ್ (ಫೈಟಿಂಗ್) ಮೊದಲ ಸ್ಥಾನ ಗೋಲ್ಡ್ ಮತ್ತು ಜೂನಿಯರ್ ವಿಭಾಗದ ತುಂಗಲ್ನಲ್ಲಿ ಕಂಚಿನ ಪದಕ ಪಡೆದರು.

ಭಾಗ್ಯನಗರದ ಪಯೋನಿಯರ್ ಪಬ್ಲಿಕ್ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ ಅಕ್ಷರ ಎಂ.ಗೊಂಡಬಾಳ ಪ್ರಿಟೀನ್ (54-56 ಕೆಜಿ) ವಿಭಾಗದಲ್ಲಿ ಟ್ಯಾಂಡಿಂಗ್ (ಫೈಟಿಂಗ್) ಮೊದಲ ಸ್ಥಾನ ಗೋಲ್ಡ್ ಮತ್ತು ಜೂನಿಯರ್ ವಿಭಾಗದ ತುಂಗಲ್ನಲ್ಲಿ ಮೊದಲ ಸ್ಥಾನ ಗೋಲ್ಡ್ ಪಡೆದು ಜುಲೈ 19-20ರಂದು ತಮಿಳುನಾಡಿನ ಚನೈನಲ್ಲಿ ನಡೆಯುವ ರಾಷ್ಟ್ರೀಯ ಸೌತ್ ಝೋನ್ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ರಾಷ್ಟ್ರ ಪೆಂಕಾಕ್ ಸಿಲಾತ್ ತಾಂತ್ರಿಕ ನಿರ್ದೇಶಕ ಅಬ್ದುಲ್ ರಜಾಕ ಟೈಲರ, ರಾಜ್ಯ ಪೆಂಕಾಕ್ ಸಿಲಾತ್ ಕಾರ್ಯದರ್ಶಿ ವಿಜಯಕುಮಾರ ಹಂಚಿನಾಳ, ರಾಜ್ಯ ಜಂಟಿ ಕಾರ್ಯದರ್ಶಿಗಳಾದ ಮಂಜುನಾಥ ಜಿ. ಗೊಂಡಬಾಳ, ಮಣಿಪುರ ರಾಜ್ಯ ಹಿರಿಯ ತರಬೇತುದಾರ ಗೊಯಿನೊ, ಜಿಲ್ಲಾ ಕಾರ್ಯದರ್ಶಿ ಈರಣ್ಣ ಬಾದಾಮಿ, ಕೋಚ್ ಆಕಾಶ್ ದೊಡ್ಡವಾಡ ಮತ್ತು ಮಹ್ಮದ್ ಅಜರುದ್ದಿನ್, ಜಂಪ್ ರೋಪ್ ಅಸೋಸಿಯೇಷನ್ ಹಿರಿಯ ಉಪಾಧ್ಯಕ್ಷೆ ರೇಣುಕಾ ಪುರದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.