ಸೋಮವಾರ, ಸೆಪ್ಟೆಂಬರ್ 20, 2021
23 °C
ಹಾಬಲಕಟ್ಟಿ: ಕೃಷಿ ಪತ್ತಿನ ಸಂಘ ಆರಂಭ

‘ಪರಸ್ಪರ ಸಹಕಾರ ತತ್ವ ಅನುಸರಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

 ಹನುಮಸಾಗರ: ‘ಆರ್ಥಿಕವಾಗಿ ದುರ್ಬಲರಾದವರು ಸಮಾನತೆಯ ತಳಹದಿಯ ಮೇಲೆ ಸಂಘಟಿತರಾಗಿ, ಪರಸ್ಪರ ಸಹಾಯದಿಂದ ಅಭಿವೃದ್ಧಿ ಹೊಂದುವ ಉದ್ದೇಶ ಇಟ್ಟುಕೊಳ್ಳುವುದರ ಮೂಲಕ ಸಂಘದ ಅಭಿವೃದ್ಧಿಗೂ ಕೈಜೋಡಿಸಬೇಕು‘ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದಪ್ಪ ಕವಡಿಕಾಯಿ ಹೇಳಿದರು.

ಸೋಮವಾರ ಸಮೀಪದ ಹಾಬಲಕಟ್ಟಿ ಗ್ರಾಮದಲ್ಲಿ ನೂತನವಾಗಿ ಆರಂಭಿಸಲಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಥಮ ರೈತರ ಸಭೆಯಲ್ಲಿ ಅವರು ಮಾತನಾಡಿದರು.

ಸಹಕಾರಿ ವ್ಯವಸ್ಥೆಯಲ್ಲಿ ಜನರಿಗೆ ಅತಿ ಸುಲಭವಾಗಿ ಕೈಗೆಟಕುವ ದರದಲ್ಲಿ ಸಾಲ ಸೌಲಭ್ಯ ಸಿಗುತ್ತಿದ್ದು, ಗ್ರಾಮೀಣ ಜನರಿಗೆ ಅದರಲ್ಲೂ ಕೃಷಿಕರಿಗೆ ಅತ್ಯಂತ ಅನುಕೂಲಕರವಾಗಿದೆ. ಉತ್ಪಾದನೆಯಾದ ಕೃಷಿ ಉತ್ಪನ್ನಗಳನ್ನು ವ್ಯವಸ್ಥಿತ ಮಾರಾಟ ಮಾಡುವುದರಲ್ಲೂ ಈ ಸಂಘದ ನೆರವು ದೊರಕುತ್ತದೆ. ಸಹಕಾರ ತತ್ವಗಳನ್ನು ಅನುಸರಿಸುವುದರ ಮೂಲಕ ಕೃಷಿ, ಆರ್ಥಿಕತೆ ಅಭಿವೃದ್ಧಿಪಡಿಸಿಕೊಳ್ಳಲು ನೆರವಾಗುತ್ತದೆ ಎಂದರು.

ಜಹಗೀರಗುಡದೂರು ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಸಂಗಮೇಶ ಗುಜ್ಜಲ ಮಾತನಾಡಿ, ರೈತರಿಗೆ ಹಣಕಾಸಿನ ಸೌಲಭ್ಯ ನೀಡುವ ಸಹಕಾರಿ ವ್ಯವಸ್ಥೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳೇ ಜೀವಾಳವಾಗಿವೆ. ಸದೃಢವಾದ ಸಂಘಗಳು ಕೇವಲ ತನ್ನ ಸದಸ್ಯರಿಗೆ ಮಾತ್ರವಲ್ಲ ಊರಿಗೆ, ಸಮಾಜಕ್ಕೆ ಮತ್ತು ದೇಶಕ್ಕೂ ಆಸ್ತಿಗಳಾಗಿವೆ‘ ಎಂದರು.

ಈ ಸಹಕಾರ ಸಂಘಕ್ಕೆ ಹಾಬಲಕಟ್ಟಿ, ಗಡಚಿಂತಿ, ಮಾಸ್ತಕಟ್ಟಿ ಗ್ರಾಮಗಳಿಂದ 456 ಶೇರುದಾರರಗಿದ್ದಾರೆ ಎಂದು ಹೇಳಿದರು.

ಪ್ರಮುಖರಾದ ಮಹಾಂತೇಶ ಕಾಡದ, ರಂಗನಾಥ ಮಡಿವಾಳರ, ಸತ್ಯಪ್ಪ ರಾಜೂರು, ರೈತ ಮುಖಂಡ ಯಮನೂರಪ್ಪ ಅಬ್ಬಿಗೇರಿ, ಶಂಕರಪ್ಪ ಚಕ್ಕಡಿ, ಬಸವರಾಜ, ಗ್ರಾ.ಪಂ ಅಧ್ಯಕ್ಷ ಯಮನೂರಪ್ಪ ಭಂಜತ್ರಿ, ಶರಣಪ್ಪ ಯರಗೇರಿ, ಶರಣಪ್ಪ ಹರಿಜನ, ಕೆ.ಜಿ.ಆಲೂರು, ವೆಂಕಟೇಶ ಕಬ್ಬರಗಿ, ರಮೇಶ್ ಭೋವಿ, ಸಂಗಪ್ಪ ಸೊಬರದ, ಮೋಹನ್ ಪೂಜಾರಿ, ಶಂಕರ ಗಡಾದ, ಶಿವಶರಣಪ್ಪ ಹೆಬ್ಬುಲಿ, ಯಮನಪ್ಪ ಹುಲಿ, ಯಮನಪ್ಪ ದಳಪತಿ, ಸಂಗಪ್ಪ ಸೊಬರದ, ಯಮನೂರಪ್ಪ ದಂಡಿಮನಿ, ಮುತ್ತಣ್ಣ ಹರಿಜನ, ಸಂಗನಗೌಡ ದಳಪತಿ, ಬಾಳಪ್ಪ ನಾಗರಾಳ, ಶರಣಪ್ಪ ತಳಕೇರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.