ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳವಂಡಿ: ಎನ್ಎಂಎಂಎಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ

Last Updated 16 ಜುಲೈ 2021, 5:15 IST
ಅಕ್ಷರ ಗಾತ್ರ

ಅಳವಂಡಿ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವ ಉದ್ದೇಶದಿಂದ ಎನ್‌ಸಿಇಆರ್‌ಟಿ ನಡೆಸಿದ ರಾಷ್ಟ್ರೀಯ ಪ್ರತಿಭಾ ಪುರಸ್ಕಾರ (ಎನ್ಎಂಎಂಎಸ್) ಪರೀಕ್ಷೆಯಲ್ಲಿ ಅಳವಂಡಿ ಸಮೀಪದ ನೀರಲಗಿ ಹಾಗೂ ಮೈನಳ್ಳಿ ಗ್ರಾಮದ ಹಲವು ವಿದ್ಯಾರ್ಥಿಗಳು ಉತ್ತೀರ್ಣವಾಗುವ ಮೂಲಕ ಗಮನಸೆಳೆದಿದ್ದಾರೆ.

ನೀರಲಗಿ: ಅಳವಂಡಿ ಸಮೀಪದ ನೀರಲಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7 ವಿದ್ಯಾರ್ಥಿಗಳು 2020-21ನೇ ಸಾಲಿನ ಎನ್ಎಂಎಂಎಸ್ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳ ಸಾಧನೆ ಹಿಂದೆ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಹೋಳಿಬಸಯ್ಯ ಅವರ ಶ್ರಮವಿದೆ.

ಇಲ್ಲಿನ ವಿದ್ಯಾರ್ಥಿಗಳಿಗೆ ಶಾಲಾ ದಿನ ಸೇರಿದಂತೆ ಶನಿವಾರ ಮತ್ತು ಭಾನುವಾರವೂ ತರಗತಿಗಳನ್ನು ನಡೆಸಲಾಗಿದೆ.

ಆಯ್ಕೆಯಾದ ವಿದ್ಯಾರ್ಥಿಗಳು: ಆರ್.ಎಂ.ಶಿವುಕುಮಾರ, ಬಸವರಾಜ, ಪವಿತ್ರಾ ಐನಕ್ಕನರ, ಅಂಬಿಕಾ ಅಜ್ಜನವರ, ಪವನ ಕುಮಾರ ರಾಮನಗೌಡ, ಬಸವರಾಜ ದಡ್ಡಿನ, ಅನ್ನಪೂರ್ಣ ಯಲ್ಲಮ್ಮನವರ ಎನ್ಎಂಎಂಎಸ್ ಪರೀಕ್ಷೆಯಲ್ಲಿ ವಿದ್ಯಾರ್ಥಿ ವೇತನ ಪಡೆಯಲು ಆಯ್ಕೆಯಾಗಿದ್ದಾರೆ.

ಮೈನಳ್ಳಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಂಗ್ಲಿಷ್ ಶಿಕ್ಷಕ ಬಸವರಾಜ ಚಿತ್ತಾಪುರ ಅವರ ಮಾರ್ಗದರ್ಶನದಿಂದ ಈ ಶಾಲೆಯಲ್ಲಿ 10 ವಿದ್ಯಾರ್ಥಿಗಳು ಎನ್ಎಂಎಂಎಸ್ ಪರೀಕ್ಷೆಯಲ್ಲಿಉತ್ತೀರ್ಣರಾಗಿದ್ದಾರೆ.

ಇದೇ ಶಾಲೆಯ ಮೂವರು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕೊಪ್ಪಳ ಜಿಲ್ಲೆಯ ಮೊದಲ 3 ಸ್ಥಾನಗಳನ್ನು ಪಡೆದಿದ್ದಾರೆ.

ಸ್ವಾತಿಕ ಕುರಡಗಿ (ಪ್ರಥಮ), ಸುಷ್ಮಿತಾ ಅಂಗಡಿ (ದ್ವಿತೀಯ), ಗವಿಸಿದ್ದಯ್ಯ ಕುರುವತ್ತಿಮಠ (ತೃತೀಯ) ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ವಿದ್ಯಾರ್ಥಿಗಳಾದ ಅನಿತಾ ಬೋಚನಳ್ಳಿ, ದಿವ್ಯಾ ಬಳಗೇರ, ಗುರಮ್ಮ ಬೋಚನಹಳ್ಳಿ, ನೇತ್ರಾವತಿನರಹಟ್ಟಿ, ಅಭಿಷೇಕ ಕಿನ್ನಾಳ, ವಿನಾಯಕ ರೊಟ್ಟಿಆಯ್ಕೆಯಾಗಿದ್ದಾರೆ.

ಲಾಕ್‌ಡೌನ್‌ನಲ್ಲಿ ನಿರಂತರಪರಿಶ್ರಮ: ಎನ್ಎಂಎಂಎಸ್ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಈ ಹಿಂದಿನ ವರ್ಷದಲ್ಲಿ ನಡೆದ ಪರೀಕ್ಷೆ ಪತ್ರಿಕೆಗಳನ್ನು ಇರಿಸಿಕೊಂಡು ಶಿಕ್ಷಕರು ಪಾಠಮಾಡುತ್ತಿದ್ದರು.

ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೀರಲಗಿ ಹಾಗೂ ಮೈನಳ್ಳಿ ಗ್ರಾಮದ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಅಭಿನಂದಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT