ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕ ವೀರಯ್ಯ ವರ್ಗಾವಣೆ: ಕಣ್ಣೀರಾದ ವಿದ್ಯಾರ್ಥಿಗಳು

Last Updated 3 ಜನವರಿ 2022, 12:22 IST
ಅಕ್ಷರ ಗಾತ್ರ

ಅಳವಂಡಿ: ಸಮೀಪದ ನಿಲೋಗಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ವೀರಯ್ಯ ಅವರು ವರ್ಗಾವಣೆಗೊಂಡ ಕಾರಣ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಣ್ಣೀರು ಹಾಕಿದರು.

12 ವರ್ಷಗಳಿಂದ ಗಣಿತ, ವಿಜ್ಞಾನ ಶಿಕ್ಷಕರಾಗಿ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ವೀರಯ್ಯ ಎಚ್.ಎಂ ಅವರು ಯಲಬುರ್ಗಾ ತಾಲ್ಲೂಕಿನ ವಟಪರವಿ ಗ್ರಾಮಕ್ಕೆ ವರ್ಗಾವಣೆ ಆಗಿದ್ದಾರೆ.

‘ನೀವು ಚೆನ್ನಾಗಿ ಪಾಠ ಮಾಡುತ್ತೀರಿ, ಇನ್ನೂ ನಿಮ್ಮ ಪಾಠ ಕೇಳಬೇಕು. ದಯವಿಟ್ಟು ನೀವು ಹೋಗಬೇಡಿ, ಇಲ್ಲೇ ಇರಿ’ ಎಂದು ವಿದ್ಯಾರ್ಥಿಗಳು ಶಿಕ್ಷಕ ವೀರಯ್ಯ ಅವರ ಬಳಿ ಕಣ್ಣೀರು ಹಾಕುತ್ತಾ ಮನವಿ ಮಾಡುಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಅಳುತ್ತಳೇ ವರ್ಗಾವಣೆಯಾಗಿರುವ ಶಿಕ್ಷಕನ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು‌. ಶಾಲೆಯ ಸಹ ಶಿಕ್ಷಕರೂ ನೆಚ್ಚಿನ ಶಿಕ್ಷಕರು ವರ್ಗಾವಣೆಯಾಗಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತರು.

ಈ ಪ್ರೀತಿಯ ಕಂಡು ವೀರಯ್ಯರವರು ಕೂಡ ಭಾವುಕರಾಗಿ ಕಣ್ಣೀರು ಸುರಿಸಿದರು. ಈ ಪರಿಯ ಪ್ರೀತಿ ಕೊಟ್ಟ ಶಾಲೆಗೆ ಪ್ರೀತಿಯ ಧನ್ಯವಾದ ತಿಳಿಸಿದರು.

ವರ್ಗಾವಣೆಗೊಂಡ ಶಿಕ್ಷಕ ವೀರಯ್ಯ ಅವರು ಮಾತನಾಡಿ,‘ಇಲ್ಲಿ ಪ್ರೀತಿ ಕಾಲುಗಳನ್ನು ಕಟ್ಟಿ ಹಾಕಿದೆ. ಕಣ್ಣೀರು ತಡೆಗೋಡೆಯಂತೆ ನಿಂತಿದೆ. ಅಭಿಮಾನ ಅಡ್ಡಲಾಗಿ ನಿಂತಿದೆ. ಬಿಟ್ಟು ಹೋಗಲು ಆಗುತ್ತಿಲ್ಲ. ಕಂಬನಿ ನೋಡೋಕೆ ಆಗುತ್ತಿಲ್ಲ’ ಎಂದು ಮಕ್ಕಳ ಅಕ್ಕರೆಯ ಆಕ್ರಂದನದಲ್ಲಿ ಸಿಹಿ ಸಂಕಟದಲ್ಲಿ ಬಿಕ್ಕುತ್ತಾ ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT