ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಮಟ್ಟಕ್ಕೆ ಶಾರದಾ ಶಾಲೆ ವಿದ್ಯಾರ್ಥಿಗಳು ಆಯ್ಕೆ

Published 6 ಅಕ್ಟೋಬರ್ 2023, 14:17 IST
Last Updated 6 ಅಕ್ಟೋಬರ್ 2023, 14:17 IST
ಅಕ್ಷರ ಗಾತ್ರ

ಕೊಪ್ಪಳ: ಇಲ್ಲಿಗೆ ಸಮೀಪದ ಕಿಡದಾಳದಲ್ಲಿರುವ ಶಾರದಾ ಇಂಟರ್‌ನ್ಯಾಷನಲ್‌ ಶಾಲೆಯ ವಿದ್ಯಾರ್ಥಿಗಳು ಯೋಗ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 

ಬಳ್ಳಾರಿಯಲ್ಲಿ ನಡೆದ ಕಲಬುರಗಿ ವಿಭಾಗ ಮಟ್ಟದ ದಸರಾ ಯೋಗ ಕ್ರೀಡಾಕೂಟದ ಬಾಲಕಿಯರ ವಿಭಾಗದಲ್ಲಿ ತನ್ಮಯಿ ಪಾಟೀಲ್ ಸಂಪ್ರದಾಯಿಕ ಯೋಗ ಮತ್ತು ಆರ್ಟಿಸ್ಟಿಕ್‌ ಸೋಲೊ ಯೋಗ ಎರಡರಲ್ಲಿಯೂ ಪ್ರಥಮ ಸ್ಥಾನ ಪಡೆದು ಎರಡು ಚಿನ್ನದ ಪದಕಗಳನ್ನು ಗಳಿಸಿದ್ದಾರೆ.

ಬಾಲಕರ ವಿಭಾಗದಲ್ಲಿ ಆಂಜನೇಯ, ಆದಿಶೇಷ ಸಾಯಿ ಆರ್ಟಿಸ್ಟಿಕ್ ಪೇರ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ರಿದಮಿಕ್ ಪೇರ್ ಯೋಗ ಸ್ಪರ್ಧೆಯಲ್ಲಿ ಚೈತ್ರಾ ಎಸ್‌.ಎಚ್‌, ಮತ್ತು ಶ್ರಾವಣಿ ಎಸ್‌. ಪಾಟೀಲ ತೃತೀಯ ಸ್ಥಾನ ಗಳಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ವೀರನಗೌಡ ಆರ್. ಪಾಟೀಲ, ಕಾರ್ಯದರ್ಶಿ ಶರಣಗೌಡ ಆರ್. ಪಾಟೀಲ, ಕಾರ್ಯಕಾರಣಿ ನಿರ್ದೇಶಕರಾದ ಶಿವಪ್ರಕಾಶ್ ಎಂ, ವಿಶ್ವನಾಥ ರೆಡ್ಡಿ, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT