ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌| ಹರಿದ ಬದುಕು: ದರ್ಜಿಗಳು ಕಂಗಾಲು

ಬಟ್ಟೆ ಹೊಲಿಯುವ ಯಂತ್ರಗಳು ಸ್ತಬ್ಧ: ಕುಟುಂಬ ನಿರ್ವಹಣೆಗೆ ಪರದಾಟ
Last Updated 23 ಮೇ 2021, 19:30 IST
ಅಕ್ಷರ ಗಾತ್ರ

ಕುಕನೂರು: ಕೋವಿಡ್ ಲಾಕ್‍ಡೌನ್‌ನಿಂದಾಗಿ ಪ್ರತಿನಿತ್ಯ ದುಡಿಮೆಯಲ್ಲಿಯೇ ಜೀವನ ಸಾಗಿಸುವ ಅನೇಕರ ಜೀವನ ದುಸ್ತರವಾಗಿದೆ.

ದಿನನಿತ್ಯ ಬಟ್ಟೆ ಹೊಲೆದು ಜೀವನ ನಿರ್ವಹಿಸುವ ಟೈಲರ್‌ಗಳ ಸ್ಥಿತಿಯೂ ಮೂರಾ ಬಟ್ಟೆಯಾಗಿದೆ. ಯಂತ್ರಗಳು ಸ್ತಬ್ಧವಾದ ಕಾರಣ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಟ್ಟೆ ಹೊಲಿದರೆ ಮಾತ್ರ ಜೀವನ: ಪ್ರತಿನಿತ್ಯ ಬಟ್ಟೆ ಹೊಲೆದು ಸಿಗುವ ಅಷ್ಟಿಷ್ಟು ಹಣದಲ್ಲಿಯೇ ಕುಟುಂಬ ನಿರ್ವಹಣೆ ಮಾಡುವ ಟೈಲರ್ ವೃತ್ತಿಯನ್ನೇ ನಂಬಿ ಬದುಕಿರುವ ಸಾವಿರಾರು ಕುಟುಂಬಗಳು ತಾಲ್ಲೂಕಿನಲ್ಲಿವೆ.

ಲಾಕ್‍ಡೌನ್ ಅವಧಿಯಲ್ಲಿ ಇಂದಿಗೂ ಕೆಲಸವಿಲ್ಲದೆ, ಹಣವೂ ಇಲ್ಲದೆ ಕುಟುಂಬ ನಿರ್ವಹಿಸಲು ಹೆಣಗಾಡುತ್ತಿದ್ದಾರೆ. ಬಟ್ಟೆ ಹೊಲೆಯುವುದನ್ನು ಬಿಟ್ಟರೆ ಬೇರೆ ಯಾವುದೇ ಉದ್ಯೋಗದ ಅರಿವಿಲ್ಲದ ಟೈಲರ್‌ಗಳು ದಿನನಿತ್ಯದ ಅಗತ್ಯ ವಸ್ತುಗಳಾದ ದಿನಸಿ, ಮನೆ ಮತ್ತು ಅಂಗಡಿಗಳ ಬಾಡಿಗೆ ವೆಚ್ಚ ಸರಿದೂಗಿಸಲಾಗದೆ ಚಡಪಡಿಸುವಂತಾಗಿದೆ.

ಅಸಂಘಟಿತ ವಲಯವಾದ ಟೈಲರ್‌ಗಳು ನೆರವಿಗೆ ಇದುವರೆಗೂ ಸರ್ಕಾರ ಮುಂದಾಗಿಲ್ಲ. ಲಾಕ್‍ಡೌನ್‍ನಿಂದಾಗಿ ಅಂಗಡಿ ತೆಗೆಯುವಂತಿಲ್ಲ. ಕೈಯಲ್ಲಿ ಕಾಸಿಲ್ಲದ ಸ್ಥಿತಿಯಲ್ಲಿ ದಿನ ದೂಡುತ್ತಿದ್ದಾರೆ. ಅಲ್ಲೊಂದು ಇಲ್ಲೊಂದು ಸಂಘ ಸಂಸ್ಥೆಗಳು ಆಹಾರ ಧಾನ್ಯದ ಕಿಟ್‍ಗಳನ್ನು ನೀಡುತ್ತಿದ್ದರೂ ಅದು ಎಲ್ಲ ಟೈಲರ್‌ಗಳನ್ನು ತಲುಪುತ್ತಿಲ್ಲ. ಸರ್ಕಾರದ ಪಡಿತರ ಕೂಡ ನ್ಯಾಯಬೆಲೆ ಅಂಗಡಿಗಳಲ್ಲಿ ಸರಿಯಾಗಿ ಸಿಗುತ್ತಿಲ್ಲ ಎಂಬ ದೂರಿದೆ. ಇಂಥ ವಿಷಮ ಸ್ಥಿತಿಯಲ್ಲಿ ಬದುಕುತ್ತಿರುವ ಟೈಲರ್‌ಗಳ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಟೈಲರ್‌ಗಳ ಸಂಘ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT