ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಲಿ: ವೃಕ್ಷೋತ್ಸವಕ್ಕೆ ಚಾಲನೆ

Last Updated 13 ಜೂನ್ 2021, 11:09 IST
ಅಕ್ಷರ ಗಾತ್ರ

ನವಲಿ (ಕನಕಗಿರಿ): ಗ್ರಾಮದ ಭೋಗಾಪುರೇಶ್ವರ ದೇವಸ್ಥಾನದ ಆವರಣದಲ್ಲಿ ನವಲಿ ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ ಹಾಗೂ ಸ್ಥಳೀಯ ಭಕ್ತರ ನೇತೃತ್ವದಲ್ಲಿ ಭಾನುವಾರ ವೃಕ್ಷೋತ್ಸವ ಕಾರ್ಯಕ್ರಮ ನಡೆಯಿತು.

ಶಾಸಕ ಬಸವರಾಜ ಡಢೇಸೂಗೂರು ಅವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು,‘ಮಾನವನಿಗೆ ಶುದ್ದ ಆಮ್ಲಜನಕದ ಅವಶ್ಯಕತೆ ಇದೆ. ಮನುಕುಲದ ಉಳಿವಿಗಾಗಿ ಪ್ರತಿಯೊಬ್ಬರು ಮರಗಳನ್ನು ಬೆಳೆಸಿ ಉಳಿಸುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ದೇವಸ್ಥಾನಕ್ಕೆ ರಕ್ಷಣಾ ಗೋಡೆ ನಿರ್ಮಾಣ ಮಾಡಿಕೊಡುವುದಾಗಿ ಈ ಸಮಯದಲ್ಲಿ ಅವರು ಭರವಸೆ ನೀಡಿದರು.

ದಾನಿಗಳು ಹಾಗೂ ಸ್ಥಳೀಯರ ಶ್ರಮದಿಂದ ನಿರ್ಮಾಣಗೊಂಡ ಹೊಸ ರಥವನ್ನು ಅವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ ನಿಂಗಪ್ಪ ನಾಯಕ, ಉಪಾಧ್ಯಕ್ಷ ನಾಗಪ್ಪ ಈಚನಾಳ, ಸದಸ್ಯರಾದ ಕಾಡನಗೌಡ, ದುರುಗಪ್ಪ ಭಜಂತ್ರಿ, ನಾಗೇಶ ಪರಂಗಿ, ಮಾಜಿ ಅಧ್ಯಕ್ಷ ಮರಿರಾಜ ಭಜಂತ್ರಿ, ಮುಖಂಡರಾದ ಪಂಚಯ್ಯ ಸ್ವಾಮಿ ಬಿದ್ನೂರಮಠ, ವಿರುಪಣ್ಣ ಕಲ್ಲೂರ ನಿಂಗಪ್ಪ ನಾಯಕ, ದುರುಗೇಶ ಹರಿಜನ, ಚೇತನಕುಮಾರ, ಪಾಂಡಪ್ಪ, ಬಸನಗೌಡ ಆದಾಪುರ, ಜಡಿಯಪ್ಪ ಆದಾಪುರ ,ವೆಂಕಟೇಶ ಆದಾಪೂರ ಮಲ್ಲಿಕಾರ್ಜುನ ಖ್ಯಾಡೇದ್, ಅರ್ಚಕರಾದ ನಾರಾಯಣರಾವ್ ಕುಲಕರ್ಣಿ, ಪವನಕುಮಾರ ಗುಂಡೂರ
ಹಾಗೂ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT