ಭಾನುವಾರ, ಜನವರಿ 19, 2020
29 °C

ಕೊಪ್ಪಳ| ಗ್ರಹಣ: ದೇಗುಲ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಜಿಲ್ಲೆಯ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಾಲ್ಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಅಮವಾಸ್ಯೆ ನಿಮಿತ್ತ ಹಾಗೂ ಕಂಕಣಾಕೃತಿ ಸೂರ್ಯಗ್ರಹಣ ಪ್ರಯುಕ್ತ ಡಿ. 25 ರಂದು ಸಂಜೆ 6 ಗಂಟೆಯಿಂದ ಡಿ.26 ರ ಮಧ್ಯಾಹ್ನ 12-30 ರವರೆಗೆ ಶ್ರೀದೇವಿ ದರ್ಶನ ಇರುವುದಿಲ್ಲ.ಡಿ. 25 ರಂದು ಸಂಜೆ 6ಕ್ಕೆ ವೇದಾರಂಭದೊಂದಿಗೆ ದೇವಸ್ಥಾನವನ್ನು ಬಂದ್ ಮಾಡಲಾಗುವುದು.

26 ರಂದು ಅಮವಾಸ್ಯೆ ಇರುವುದರಿಂದ ಮಧ್ಯಾಹ್ನ ಆರಂಭವಾಗಲಿದೆ. ಭಕ್ತರು ಗಮನಿಸಬೇಕು. ಇದಕ್ಕೆ ಸಹಕರಿಸಬೇಕು ಎಂದು ಹುಲಿಗೆಮ್ಮ ದೇವಿ ದೇವಸ್ಥಾನ ಕಾರ್ಯನಿರ್ವಾಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)