ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಯ ದಿನಾಂಕ ವದಂತಿ: ಇ ಕೆವೈಸಿಗಾಗಿ ಗ್ಯಾಸ್ ಎಜೆನ್ಸಿಗಳ ಮುಂದೆ ಜನಜಂಗುಳಿ

Published 28 ಡಿಸೆಂಬರ್ 2023, 15:36 IST
Last Updated 28 ಡಿಸೆಂಬರ್ 2023, 15:36 IST
ಅಕ್ಷರ ಗಾತ್ರ

ಕೊಪ್ಪಳ: ಅಡುಗೆ ಅನಿಲ ಹೊಂದಿರುವವರು ಕಡ್ಡಾಯವಾಗಿ ಇದೇ ಡಿ. 31ರ ಒಳಗೆ ಇ ಕೆವೈಸಿ ಮಾಡಿಸಬೇಕು, ಇಲ್ಲವಾದರೆ ಸಿಲಿಂಡರ್‌ಗೆ ಲಭಿಸುವ ಸಬ್ಸಿಡಿ ರದ್ದಾಗುತ್ತದೆ ಎನ್ನುವ ವದಂತಿ ಜಿಲ್ಲೆಯ ಜನರಲ್ಲಿ ಗೊಂದಲ ಮೂಡಿಸಿತು.

ಗುರುವಾರ ಕೊಪ್ಪಳ, ಕುಷ್ಟಗಿ, ಅಳವಂಡಿ, ಮುನಿರಾಬಾದ್‌, ಗಂಗಾವತಿ ಸೇರಿದಂತೆ ಬಹುತೇಕ ಕಡೆ ಗ್ರಾಹಕರು ಗ್ಯಾಸ್‌ ಎಜೆನ್ಸಿಗಳ ಮುಂದೆ ಗಂಟೆಗಟ್ಟಲು ತಮ್ಮ ಇ ಕೆವೈಸಿ ದಾಖಲೆಗಳನ್ನು ಜೊತೆಗಿಟ್ಟುಕೊಂಡು ಸರತಿಯಲ್ಲಿ ನಿಂತಿದ್ದರು. ತಮಗೇ ಮೊದಲು ಅವಕಾಶ ಲಭಿಸಬೇಕು ಎಂದು ಗ್ರಾಹಕರ ನಡುವೆಯೇ ತಳ್ಳಾಟ ಹಾಗೂ ನೂಕಾಟವೂ ನಡೆಯಿತು.

31 ಕೊನೆಯ ದಿನ ಎನ್ನುವ ವದಂತಿ ಬಾಯಿಯಿಂದ ಬಾಯಿಗೆ ಹರಡಿ ಕೆಲವೇ ಹೊತ್ತಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಎಜೆನ್ಸಿಗಳ ಮುಂದೆ ಜಮೆಯಾದರು. ಒಬ್ಬರೇ ಎರಡು ಗ್ಯಾಸ್‌ ಸಂಪರ್ಕ ಹೊಂದಿರಬಾರದು ಎನ್ನುವುದರ ಸಲುವಾಗಿ ಕೇಂದ್ರ ಸರ್ಕಾರ ಎನ್ನುವ ಕಾರಣಕ್ಕಾಗಿ ಇ ಕೆವೈಸಿ ಕಡ್ಡಾಯ ಮಾಡಿದೆ. ಆದರೆ ಅಂತಿಮ ದಿನ ನಿಗದಿ ಮಾಡಿಲ್ಲ.

ಇದರ ಬಗ್ಗೆ ಗ್ಯಾಸ್‌ ಎಜೆನ್ಸಿಯ ಮಾಲೀಕರು ಗ್ರಾಹಕರಿಗೆ ತಿಳಿ ಹೇಳಿದರೂ ಜನ ವಾಪಸ್‌ ಹೋಗಲಿಲ್ಲ. ಸಾಮಾಜಿಕ ತಾಣಗಳಲ್ಲಿ ಡಿ. 31 ಕೊನೆಯ ದಿನವೆಂದು ಬರುತ್ತಿದೆ. ಸಬ್ಸಿಡಿ ಹೋದರೆ ಯಾರು ಕೊಡುತ್ತಾರೆ ಎಂದು ಗ್ರಾಹಕರು ಪ್ರಶ್ನೆ ಮಾಡಿದರು.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಇಲ್ಲಿನ ಗ್ರಾಹಕ ನರಸಿಂಹ ಪ್ಯಾಟಿ ’ಇದೇ ತಿಂಗಳು ಇ ಕೆವೈಸಿಗೆ ಕೊನೆಯ ದಿನವೆಂದು ಸಾಮಾಜಿಕ ಜಾಲತಾಣ ಜನರಿಂದ ಜನರಿಗೆ ಹರಡಿದ್ದರಿಂದ ಇಲ್ಲಿಗೆ ಬಂದಿದ್ದೇನೆ. ಬಂದು ಎರಡು ತಾಸಾದರೂ ಜನ ಬರುತ್ತಲೇ ಇದ್ದಾರೆ. ಈಗಾಗಲೇ ಗಂಟೆಗಟ್ಟಲೆ ಕಾದು ಸಾಕಾಗಿದೆ’ ಎಂದು ಹೇಳಿದರು.

Highlights - null

Cut-off box - ಕೊನೆಯ ದಿನಾಂಕ ಇಲ್ಲ; ಆತಂಕ ಬೇಡ ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಿಲ್ಲಾ ಅಧಿಕಾರಿಗಳು ಹಾಗೂ ವಿವಿಧ ತಾಲ್ಲೂಕುಗಳ ತಹಶೀಲ್ದಾರರು ‘ಇ ಕೆವೈಸಿಗೆ ಕೊನೆಯ ದಿನಾಂಕ ಇಲ್ಲ. ಜನ ವದಂತಿಗೆ ಕಿವಿಗೊಡಬಾರದು. ಕೆವೈಸಿ ಮಾಡಿಸಲು ಹಣ ನೀಡುವ ಅಗತ್ಯವೂ ಇಲ್ಲ’ ಎಂದಿದ್ದಾರೆ. ‘ಮೊದಲ ಆದ್ಯತೆಯಾಗಿ ಉಜ್ವಲ ಯೋಜನೆಯ ಗ್ಯಾಸ್‌ ಸಂಪರ್ಕ ಪಡೆದವರು ಇ–ಕೆವೈಸಿ ಮಾಡಿಸಬೇಕಾಗಿದೆ. ಉಳಿದವರು ಕೂಡ ತಮ್ಮ ಗ್ಯಾಸ್‌ ಸಂಪರ್ಕದ ದಾಖಲೆ ಆಧಾರ್‌ ಕಾರ್ಡ್‌ನೊಂದಿಗೆ ಇದನ್ನು ಮಾಡಿಸಬಹುದು. ಡಿ. 31ರ ಕೊನೆಯ ದಿನಾಂಕವಲ್ಲ. ಅಂತಿಮ ದಿನಾಂಕವೆಂಬುದು ಸದ್ಯಕ್ಕಂತೂ ಇಲ್ಲ’ ಎಂದು ಇಲಾಖೆಯ ಉಪ ನಿರ್ದೇಶಕ ಚಿದಾನಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT