ಬಿಸಿಲಿನಿಂದ ಪಾರಾಗಲು ದುಪ್ಪಟ್ಟ ತಲೆ ಮೇಲೆ ಹೊದ್ದು ತೆರಳಿದ ವಿದ್ಯಾರ್ಥಿನಿಯರು
ಉರಿ ಬಿಸಿಲನ್ನೂ ಲೆಕ್ಕಿಸದೆ ಧಾನ್ಯಗಳ ಮೂಟೆ ಹೇರಿಕೊಂಡು ಹೊರಟಿದ್ದ ಬಂಡಿ ಹಮಾಲ
ಕುಷ್ಟಗಿಯಲ್ಲಿ ಎಳನೀರಿನ ವ್ಯಾಪಾರದಲ್ಲಿ ತೊಡಗಿದ್ದ ಶಾಮೀದಸಾಬ್ ಕಪಾಲಿ

ಬಿಸಿಲಿನಿಂದ ಜೀವ ಹೈರಾಣಾಗಿದೆ. ಬೇಸಿಗೆ ಯಾಕಾದರೊ ಬರುತ್ತದೆ ಅನಿಸುತ್ತದೆ. ತಣ್ಣಗೆ ಮನೆಯೊಳಗೆ ಇರೋಣವೆಂದರೆ ಕೆಲವೇ ಹೊತ್ತಿನಲ್ಲಿ ಫ್ಯಾನ್ ಗಾಳಿಯೂ ಬಿಸಿಯಾಗುತ್ತದೆ
ಮಲ್ಲಪ್ಪ ತಳವಾರ ಕುಕನೂರು ನಿವಾಸಿ
ಬೆಳಿಗ್ಗೆ ಬೇಗನೆ ಎದ್ದು ನರೇಗಾ ಕೆಲಸಕ್ಕೆ ಹೋದ ಕೆಲವೇ ಹೊತ್ತಿನಲ್ಲಿ ಚುರ್ ಎನ್ನುವಷ್ಟು ಬಿಸಿಲಿನ ಶಾಖ ಬಡಿಯುತ್ತದೆ. ಆರೋಗ್ಯ ಹದಗೆಟ್ಟರೆ ಹೇಗೆ ಎನ್ನುವ ಆತಂಕ ಶುರುವಾಗಿದೆ
ವಿಶಾಲಾಕ್ಷಿ ಲಕಮಾಪುರ ನರೇಗಾ ಕೂಲಿ ಕಾರ್ಮಿಕರು ಕುಕನೂರು
ಕೂಲಿ ಹಾಗೂ ಕಟ್ಟಡ ಕಾರ್ಮಿಕರಿಗೆ ಬಿಸಿಲಿನ ತಾಪದಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ. ನಿತ್ಯ ಆರೋಗ್ಯದ ಮೇಲೂ ಸಮಸ್ಯೆಯಾಗುತ್ತಿದೆ. ಆದರೂ ದುಡಿಯುವುದು ಅನಿವಾರ್ಯ
ಯಲ್ಲಪ್ಪ ಕಲ್ಮನಿ ಕುಕನೂರು ನಿವಾಸಿ