ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೌಢ್ಯದಿಂದ‌ ಮೊದಲು‌ ಹೊರಬನ್ನಿ’

‘ಬುದ್ಧನೆಡೆಗೆ, ನಮ್ಮ ನಡೆ’ ಕಾರ್ಯಕ್ರಮ
Published 17 ಆಗಸ್ಟ್ 2023, 13:03 IST
Last Updated 17 ಆಗಸ್ಟ್ 2023, 13:03 IST
ಅಕ್ಷರ ಗಾತ್ರ

ಕನಕಗಿರಿ: ಇಲ್ಲಿನ ಛಲವಾದಿ ವಾರ್ಡ್‌ನ ಕುಮಾರಸ್ವಾಮಿ ಅವರ ಮನೆಯಲ್ಲಿ ’ಬುದ್ಧನೆಡೆಗೆ, ನಮ್ಮ ನಡೆ‘ ಎಂಬ ಧಮ್ಮ ದೀಪ ಕಾರ್ಯಕ್ರಮ ಮಂಗಳವಾರ ನಡೆಯಿತು.

ಪ್ರಾಧ್ಯಾಪಕ ಡಾ. ಲಿಂಗಣ್ಣ ಜಂಗಮರದಳ್ಳಿ ಮಾತನಾಡಿ ’ಪಟ್ಟಭದ್ರ ಹಿತಾಸಕ್ತಿಗಳು ದೇವರು, ಧರ್ಮದ ಹೆಸರಿನಲ್ಲಿ ಭಯ ಹುಟ್ಟಿಸುವ ಮೂಲಕ ದೇಶದ ಮೂಲ ನಿವಾಸಿಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೆದುಳಿನ ಮೇಲೆ ಬೀಗ ಜಡಿದಿದ್ದಾರೆ, ಇಂದಿನ ಅಧುನಿಕ‌ ಯುಗದಲ್ಲಿಯೂ ಈ ವರ್ಗ ಹೊರಬರಲಾಗದೆ ಒದ್ದಾಡುತ್ತಿದೆ‘ ಎಂದು ಕಳವಳ ವ್ಯಕ್ತಪಡಿಸಿದರು.

ಜನಕವಿ ರಮೇಶ ಗಬ್ಬೂರು ಮಾತನಾಡಿ ’ಶತಮಾನಗಳಿಂದ ಶೋಷಿತ ವರ್ಗದ ಜನರನ್ನು ಸುಳ್ಳುಗಳಿಂದ ನಂಬಿಸಿ, ಅಂಧಕಾರದಲ್ಲಿರುವಂತೆ ನೋಡಿಕೊಳ್ಳಲಾಗಿದೆ. ಹೀಗಾಗಿ ಕತ್ತಲೆಯಿಂದ ಬೆಳಕಿನೆಡೆ ಬರಬೇಕಾದರೆ ಬುದ್ಧನ ಧಮ್ಮ ದೀಪದ ಕಡೆ ನಾವೆಲ್ಲರೂ ಬರಬೇಕು ಎಂದು ತಿಳಿಸಿದರು. ಕ್ರಾಂತಿಕಾರಿ ಹಾಡುಗಳನ್ನು ಹಾಡಿ ಗಮನ ಸೆಳೆದರು.

ಗಜಲ್ ಕವಿ ಅಲ್ಲಾಗಿರಿರಾಜ ಮಾತನಾಡಿ ’ಬುದ್ಧನ ತತ್ವಗಳು ನಮ್ಮ ಬದುಕಿಗೆ ಆದರ್ಶವಾಗಬೇಕು ಅಂದಾಗ ಮಾತ್ರ ನಮ್ಮ ಬದುಕು ಸುಂದರವಾಗುತ್ತದೆ‘ ಎಂದು ಹೇಳಿದರು.

ಗಂಗಾವತಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಸಪ್ಪ ನಾಗೋಲಿ ಮಾತನಾಡಿ ’ಬುದ್ಧ ಎಂಬ ಶಕ್ತಿ ಈ ಜಗತ್ತಿನ ಮಹಾನ್ ಪುರುಷ. ಇಂಥ ಸಮಾಜ ಸುಧಾರಕರನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವುದು ಅವಶ್ಯಕತೆ ಇದೆ ಎಂದರು.

ಚಿಂತಕ ಶೇಖರ ನಾಯಕ್, ಪಟ್ಟಣ ಪಂಚಾಯಿತಿ ಸದಸ್ಯ ನೂರಸಾಬ ಗಡ್ಡಿಗಾಲ ಮಾತನಾಡಿ ’ಬುದ್ಧನ ಆದರ್ಶಗಳು ಪ್ರತಿಯೊಬ್ಬರ ಬದುಕಿಗೆ ಪ್ರೇರಣೆಯಾಗಿವೆ‘ ಎಂದರು. ನಗರಸಭೆ ಮಾಜಿ ಸದಸ್ಯ ಹುಸೇನಪ್ಪ ಹಂಚಿನಾಳ, ಪ್ರಗತಿಪರ ಸಂಘಟನೆಗಳ ಒಕ್ಕೂಟ ಚಿಂತಕ, ತಾಲ್ಲೂಕು ಅಧ್ಯಕ್ಷ, ಪಾಮಣ್ಣ ಅರಳಿಗನೂರು, ಸದಸ್ಯರಾದ ನಾಗೇಶ ಬಡಿಗೇರ, ನೀಲಕಂಠ ಬಡಿಗೇರ, ನಾಗೇಶ ಪೂಜಾರ, ಮರಿಸ್ವಾಮಿ, ಡಾ.ಪಾರ್ವತಿ ಮಾತನಾಡಿದರು. ಪ್ರಮುಖರಾದ ಖಾದರಬಾಷ ಗುಡಿಹಿಂದಲ್, ಮುಕ್ತುಮಸಾಬ ಚಳ್ಳಮರದ, ಮೌನೇಶ ಇದ್ದರು.

ಬುದ್ಧ, ಬಸವ, ಡಾ.‌ಬಿ.‌ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಕುಮಾರಸ್ವಾಮಿ ಕುಟುಂಬದವರು ಬುದ್ಧ ಧಮ್ಮ ದೀಪ ಬೆಳಗಿಸಿದರು. 

ಕನಕಗಿರಿಯ ಛಲವಾದಿ ವಾರ್ಡ್ ನ ಕುಮಾರಸ್ವಾಮಿ ಅವರ ಮನೆಯಲ್ಲಿ
ಕನಕಗಿರಿಯ ಛಲವಾದಿ ವಾರ್ಡ್ ನ ಕುಮಾರಸ್ವಾಮಿ ಅವರ ಮನೆಯಲ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT