ಗುರುವಾರ , ಏಪ್ರಿಲ್ 22, 2021
28 °C

ಅಂಗವಿಕಲರಿಗೆ ಟ್ರೈಸಿಕಲ್‌ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೂಲಗೇರಿ (ಹನುಮಸಾಗರ): ಹೂಲಗೇರಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ 15ನೇ ಹಣಕಾಸು ಯೋಜನೆಯಲ್ಲಿ ಬುಧವಾರ 8 ಜನ ಅಂಗವಿಕಲರಿಗೆ ಟ್ರೈಸಿಕಲ್ ವಿತರಿಸಲಾಯಿತು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಬಂಡರಗಲ್ ಮಾತನಾಡಿ,‘ಸರ್ಕಾರ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ. ಗ್ರಾ.ಪಂ ವತಿಯಿಂದ ಅಂಗವಿಕಲ ಫಲಾನುಭವಿಗಳಿಗೆ ಟ್ರೈಸಿಕಲ್ ವಿತರಣೆ ಮಾಡಲಾಗಿದೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಯಂಕನಗೌಡರ, ಉಪಾಧ್ಯಕ್ಷ ಹನುಮಂತ ಗೊರಬಾಳ, ಸದಸ್ಯರಾದ ಶಾಂತಮ್ಮ ಕುಂಟಗೌಡ್ರ, ಗುರುಪಾದಪ್ಪ ಬೀಳಗಿ, ಮಹಿಬೂಬಸಾಬ ಉಂಡಿ, ದಾದೀಬಿ ಗಾಜಿಬಾಯಿ, ಸಿಂಧೂರ ವಡ್ಡರ, ಸುರೇಶ ಬಲಕುಂದಿ, ಕವಿತಾ ಚೌವಾಣ್, ಬಸವರಾಜ ಗೋನಾಳ, ನೀಲವ್ವ ಮ್ಯಾಗಳಮನಿ, ಲಕ್ಷ್ಮಿಬಾಯಿ ಚೌರದ, ರವಿಕುಮಾರ್ ಚೌವಾಣ್, ವಿಜಯಲಕ್ಷ್ಮಿ ತುಂಬದ ಹಾಗೂ ಗಂಗಮ್ಮ ಕಮತಗಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.