ಮುನಿರಾಬಾದ್ (ಕೊಪ್ಪಳ ಜಿಲ್ಲೆ): ತುಂಗಭದ್ರಾ ಅಣೆಕಟ್ಟೆಯ 19ನೇ ಗೇಟ್ ಮೇಲ್ಭಾಗದಲ್ಲಿ ಇರುವ ಸ್ಕೈವಾಕ್ ಕ್ರೇನ್ ಗಳ ಚಲನೆಗೆ ಅಡ್ಡಿಯಾಗುತ್ತಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಸುರಕ್ಷಿತವಾಗಿ ಸ್ಕೈವಾಕ್ ಅನ್ನು ಆಣೆಕಟ್ಟೆಯ ಜಲಾಶಯದ ಮೇಲಿನಿಂದ ಕೆಳಗೆ ಇಳಿಸಲಾಯಿತು.
ಬೃಹತ್ ಗಾತ್ರದ ಎರಡು ಕ್ರೇನ್ ಗಳ ನೆರವಿನಿಂದ ಸ್ಕೈವಾಕ್ ತೆಗೆಯಲಾಯಿತು. 19ನೇ ಗೇಟ್ ಗೆ ಅಳವಡಿಸಲು ಈಗಾಗಲೆ ಸ್ಪಾಫ್ ಲಾಕ್ ಗೇಟ್ ತರಲಾಗಿದ್ದು, ಈಗ ಇದರ ಅಳವಡಿಕೆ ಕಾರ್ಯ ನಡೆಯಲಿದೆ