ಎರಡು ಅಂಗಡಿಗಳಲ್ಲಿ ಕಳ್ಳತನ

7

ಎರಡು ಅಂಗಡಿಗಳಲ್ಲಿ ಕಳ್ಳತನ

Published:
Updated:

ಕೊಪ್ಪಳ: ನಗರದ ಪ್ರತಿಷ್ಠಿತ ಅಂಗಡಿಗಳಲ್ಲಿ ಖದೀಮರು ಕಳ್ಳತನ ಮಾಡಿರುವ ಘಟನೆ ಭಾನುವಾರ ನಸುಕಿನ ಜಾವ ನಡೆದಿದೆ.

ನಗರದ ಹೊಸಪೇಟೆ ರಸ್ತೆಯ ಕಣ್ವ ಮಾರ್ಟ್ ಹಾಗೂ ಲೈಪ್ ಸ್ಟೈಲ್ ಸಿರಾಮಿಕ್ಸ್‌ ಎಂಬ ಅಂಗಡಿಗಳಲ್ಲಿ ಕಳ್ಳತನ ನಡೆದಿದೆ, ಕಣ್ವ ಮಾರ್ಟ್‌ನಲ್ಲಿ ₹ 8 ಸಾವಿರ ಹಾಗೂ ಲೈಫ್‌ಸ್ಟೈಲ್ ಸಿರಾಮಿಕ್ಸ್ ಅಂಗಡಿಯಲ್ಲಿ ₹ 30 ಸಾವಿರ ಸೇರಿದಂತೆ ಬೆಲೆ ಬಾಳುವ ವಸ್ತಗಳು ಕಳ್ಳತನ ಆಗಿರುವ ಬಗ್ಗೆ ಮಾಹಿತಿ ದೊರೆತಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ನಗರ ಪೊಲೀಸ್ ಠಾಣೆ ಪಿಎಸ್ಐ ರವಿ ಉಕ್ಕುಂದ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !