ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘಟ್ಟಿರಡ್ಡಿಹಾಳ: ಗವಾಯಿಗಳ ಪುಣ್ಯತಿಥಿ

Last Updated 18 ಸೆಪ್ಟೆಂಬರ್ 2021, 3:58 IST
ಅಕ್ಷರ ಗಾತ್ರ

ಅಳವಂಡಿ: ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ಕಾಲ ನಿರಂತರವಾಗಿ ನಡೆದ ಭಜನಾ ಕಾರ್ಯಕ್ರಮ ಗುರುವಾರ ಮುಕ್ತಾಯಗೊಂಡಿತು. ಜೊತೆಗೆ ಗದುಗಿನ ಗಾನಯೋಗಿ ಗುರುಪುಟ್ಟರಾಜ ಗವಾಯಿಗಳ ಪುಣ್ಯತಿಥಿ ಕಾರ್ಯಕ್ರಮವೂ ನಡೆಯಿತು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಜನಾ ಮೇಳದೊಂದಿಗೆ, ಮಹಿಳೆಯರ ಕಳಸದೊಂದಿಗೆ ಶ್ರೀ ಗುರುಪುಟ್ಟ ರಾಜ ಗವಾಯಿಗಳ ಪುಣ್ಯತಿಥಿ ಅಂಗವಾಗಿ ಭಾವಚಿತ್ರ ಮೆರವಣಿಗೆ ನಡೆಯಿತು. ಭಕ್ತರು ಕಾಯಿ, ಕರ್ಪೂರ ಸಲ್ಲಿಸಿದರು.

ಅಂದಯ್ಯ ಹಿರೇಮಠ, ಶಂಭಯ್ಯ ಹಿರೇಮಠ, ದೇವಪ್ಪ ಮುಂಡರಗಿ, ವಿರುಪಾಕ್ಷಪ್ಪ ಗಿರಡ್ಡಿ, ಅಂಜಿನಪ್ಪ ವಾಲಿಕಾರ, ಶೇಕಪ್ಪ, ಬಸವರಾಜ, ಮುತ್ತಪ್ಪಗೌಡ, ಭರಮಪ್ಪ ವಾಲಿಕಾರ, ನೀಲಕಂಠಪ್ಪ, ಅಂದಪ್ಪ ರಕರಡ್ಡಿ, ಉಮೇಶ, ಹನುಮಂತ ವಾಲಿಕಾರ, ರುದ್ರಪ್ಪ ಅಂಗಡಿ, ಶರಣಪ್ಪ ಚನ್ನಳ್ಳಿ, ಅರುಣ ಅಂಗಡಿ, ಆನಂದ, ವಿನಾಯಕ, ರಘುವೀರ, ದೇವರಡ್ಡಿ ಚನ್ನಳ್ಳಿ, ಮುಕಪ್ಪ, ಬಾಬು ಅಂಗಡಿ, ಮಹೇಶ, ಸುರೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT