ವಚನಗಳಿಂದ ಸಮಾಜ ಸುಧಾರಣೆ

ಯಲಬುರ್ಗಾ: ‘ವಚನ ಸಾಹಿತ್ಯ ಸಮಾಜ ಸುಧಾರಣೆಗೆ ಮಹತ್ವದ ಕೊಡುಗೆ ನೀಡಿದೆ’ ಎಂದು ಸಾಹಿತಿ ಶೇಖರಗೌಡ ಮಾಲಿಪಾಟೀಲ ಅಭಿಪ್ರಾಯಪಟ್ಟರು.
ತಾಲ್ಲೂಕಿನ ತರಲಕಟ್ಟಿ ಗ್ರಾಮದಲ್ಲಿ ಸ್ಥಳೀಯ ಸಾಹಿತಿ ಮುಕ್ಕಾಲಪ್ಪ ನೆಲಜೇರಿ ಅವರ ಪತ್ನಿ ಲಿಂಗೈಕ್ಯ ಸಿದ್ಧಮ್ಮ ಅವರ ಸ್ಮರಣಾರ್ಥ ಭಾನುವಾರ ಆಯೋಜಿಸಲಾಗಿದ್ದ ವಚನ ಸಾಹಿತ್ಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಲೋಕದ ಅಂಕು–ಡೊಂಕುಗಳನ್ನು ತಿದ್ದುವ ಕೆಲಸವನ್ನು ವಚನಗಳು ಮಾಡಿವೆ. 12ನೇ ಶತಮಾನದ ಬಹುತೇಕ ಶರಣರು ತಮ್ಮ ವಿಚಾರಧಾರೆಗಳನ್ನು ವಚನಗಳ ಮೂಲಕವೇ ಅಭಿವ್ಯಕ್ತಪಡಿಸುತ್ತಿದ್ದರು. ಇಂದಿಗೂ ಪ್ರಸ್ತುತವಾಗಿರುವ ಅಸಂಖ್ಯಾತ ವಚನಗಳ ತಾತ್ಪರ್ಯ ಪ್ರತಿಯೊಬ್ಬರಿಗೂ ದಾರಿದೀಪವಾಗಲಿವೆ ಎಂದರು.
ಅತಿಥಿಯಾಗಿ ಭಾಗವಹಿಸಿದ್ದ ರಾಯಚೂರು ಬಸವಕೇಂದ್ರದ ಜಿಲ್ಲಾಧ್ಯಕ್ಷ ವೀರಬಧ್ರಪ್ಪ ಕುರುಕುಂದಿ ಮಾತನಾಡಿ,‘ಅನೇಕ ಶರಣರ ವಚನಗಳು ಅಪೂರ್ಣಗೊಂಡಿವೆ. ಅಲ್ಲದೆ, ಮತ್ತೆ ಕೆಲ ಶರಣರ ವಚನಗಳು ದಾಖಲಾಗದೇ ಅವರಿವರ ಹೆಸರಲ್ಲಿ ಬೆಳಕಿಗೆ ಬರುತ್ತಿವೆ. ಸಂಶೋಧನೆಯ ಮೂಲಕ ವಚನಗಳ ಮೂಲ ಪತ್ತೆ ಮಾಡಬೇಕಾಗಿದೆ’ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ತಿಮ್ಮನಗೌಡ ಚಿಲ್ಕರಾಗಿ, ಗಣ್ಯರಾದ ತೇಜನಗೌಡ ಪಾಟೀಲ, ಬಸವರಾಜ ಇಂಗಳದಾಳ, ಅಮರೇಶ ಗುಡಿಹಳ್ಳಿ, ಅಂದಪ್ಪ ಮಂಡಲಗೇರಿ, ವೀರಣ್ಣ ನಿಂಗೋಜಿ, ಕೊಟ್ರಪ್ಪ ಮುತ್ತಾಳ, ಹನಮಂತಪ್ಪ ಜಳಕಿ ಹಾಗೂ ಮಹದೇವಪ್ಪ ಗೊರೆಬಾಳ ಮಾತನಾಡಿದರು.
ಪ್ರಭುಗೌಡ ಪಾಟೀಲ, ಲೋಕೇಶ ನಾಯಕ, ರುದ್ರಪ್ಪ ಹಳ್ಳಿ, ಶ್ರೀಕಾಂತಗೌಡ ಮಾಲಿಪಾಟೀಲ, ಮುದಿಯಪ್ಪ ಮೇಟಿ, ಗನ್ನೆಪ್ಪ ಚನ್ನದಾಸರ ಇದ್ದರು, ವಿವಿಧ ವಚನ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಉಮಾದೇವಿ ಪಾಟೀಲ ನಿರೂಪಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.