ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರೋನಿ ಮಸೀದಿ ಉದ್ಘಾಟನೆ ವಕ್ಫ್‌ನಿಂದ ನೋಟಿಸ್ ಜಾರಿ

Last Updated 13 ಸೆಪ್ಟೆಂಬರ್ 2021, 6:08 IST
ಅಕ್ಷರ ಗಾತ್ರ

ಗಂಗಾವತಿ: ನಗರದ ಬೆರೋನಿ ಅಬಾದಿ ಮಸೀದಿ ವಾಣಿಜ್ಯ ಮಳಿಗೆ ಉದ್ಘಾಟನೆಯಲ್ಲಿ ಶಿಷ್ಟಚಾರ ಉಲ್ಲಂಘನೆ ಆರೋಪದಡಿ ಮಸೀದಿ ಆಡಳಿತ ಮಂಡಳಿಗೆ ಜಿಲ್ಲಾ ವಕ್ಫ್ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ಲತೀಫಿಯಾ ವೃತ್ತದ ಬಳಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಇತ್ತೀಚೆಗೆ ಅವುಗಳನ್ನು ಉದ್ಘಾಟನೆ ಮಾಡಲಾಗಿತ್ತು. ಆದರೆ ಶಿಷ್ಟಚಾರದ ಪ್ರಕಾರ ಮಳಿಗೆಯನ್ನು ಸ್ಥಳೀಯ ಶಾಸಕರ ಉದ್ಘಾಟನೆ ಮಾಡಬೇಕಾಗಿದೆ. ಆದರೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮತ್ತು ಬೆರೋನಿ ಮಸೀದಿ ಆಡಳಿತ ಮಂಡಳಿಯವರು ಶಾಸಕರ ಗಮನಕ್ಕೆ ತರದೆ, ಮಾಜಿ ಸಂಸದ ಶಿವರಾಮಗೌಡ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಶ್ರೀನಾಥ ಅವರನ್ನು ಆಹ್ವಾನಿಸಿ, ಉದ್ಘಾಟನೆ ಮಾಡಿದ್ದಾರೆ.

ಈ ಕುರಿತು ಶಾಸಕ ಪರಣ್ಣ ಮುನವಳ್ಳಿ ಅವರು ಬೆರೋನಿ ಮಸೀದಿ ಸರ್ಕಾರಿ ಆಸ್ತಿ ಆಗಿರುವುದರಿಂದ, ಸರ್ಕಾರದ ಶಿಷ್ಟಚಾರದ ಮೂಲಕ ಸಮಾರಂಭ ಆಯೋಜನೆ ಮಾಡಿ ಉದ್ಘಾಟನೆ ಮಾಡಬೇಕಾಗಿರುತ್ತದೆ. ಆದರೆ ಮಸೀದಿ ಆಡಳಿತ ಮಂಡಳಿ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು ಜಿಲ್ಲಾ ವಕ್ಫ್ ಮಂಡಳಿಗೆ ಮೌಖಿಕವಾಗಿ ದೂರು ನೀಡಿದ್ದರು.

ಈ ದೂರಿನನ್ವಯ ಜಿಲ್ಲಾ ವಕ್ಫ್ ಅಧಿಕಾರಿ ಮಕ್ಬೂಲ್ ಪಾಶ ಉದ್ಘಾಟನೆ ಕುರಿತು ಸೂಕ್ತ ಮಾಹಿತಿ ಪಡೆದು ನೋಟಿಸ್ ಜಾರಿ ಮಾಡಿದ್ದಾರೆ.

ನಂತರ ಮಾತನಾಡಿದ ಜಿಲ್ಲಾ ವಕ್ಫ್ ಅಧಿಕಾರಿ, ವಾಣಿಜ್ಯ ಮಳಿಗೆ ಉದ್ಘಾಟನೆ ಕುರಿತು ಬೆರೋನಿ ಮಸೀದಿ ಆಡಳಿತ ಮಂಡಳಿ ಇಲಾಖೆಗೆ ಯಾವುದೇ ರೀತಿಯ ಸಂದೇಶ ನೀಡಿಲ್ಲ. ಆದ್ದರಿಂದ ಶಿಷ್ಟಚಾರ ಉಲ್ಲಂಘನೆ ಅಡಿಯಲ್ಲಿ ನೋಟಿಸ್ ಜಾರಿ ಮಾಡಲಾಗಿದೆ
ಎಂದು ತಿಳಿಸಿದರು.

*ಸರ್ಕಾರದಿಂದ ಅನುದಾನ ಪಡೆಯದೆ, ದೇಣಿಗೆ ಹಣದ ಮೂಲಕ ಮಳಿಗೆ ನಿರ್ಮಿಸಲಾಗಿದೆ. ಮಳಿಗೆಯನ್ನು ಕೋವಿಡ್ ಸಂಬಂಧ ಸಾಂಕೇತಿಕವಾಗಿ ಉದ್ಘಾಟನೆ ಮಾಡಲಾಗಿದೆ. ಯಾವುದೇ ಶಿಷ್ಟಾಚಾರ ಉಲ್ಲಂಘನೆ ಮಾಡಿಲ್ಲ.

ಶಾಮೀದ್ ಮನಿಯಾರ್, ಅಧ್ಯಕ್ಷ, ಬೆರೋನಿ ಮಸೀದಿ ಆಡಳಿತ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT