ಮನೆಯಲ್ಲಿ ತಾಯಿಯ ಕೈ ರುಚಿ ಹೇಗಿರುತ್ತದೋ ಅಷ್ಟೇ ರುಚಿ ಮತ್ತು ಗುಣಮಟ್ಟದ ಊಟ ಜಯಮ್ಮ ಅವರ ಹೊಟೇಲ್‌ನಲ್ಲಿ ಸಿಗುತ್ತದೆ. ಬೆಲೆಯೂ ಕಡಿಮೆ ಇರುತ್ತದೆ. ನಿತ್ಯ ಇಲ್ಲಿ ಊಟ ಮಾಡುವವರಿಗೆ ₹10 ಕಡಿಮೆ ತೆಗೆದುಕೊಳ್ಳುತ್ತಾರೆ ವಿನಯಕುಮಾರ, ಫೈನಾನ್ಸ್ ಸಿಬ್ಬಂದಿ, ಗಂಗಾವತಿ ಜಯಮ್ಮ ಅವರ ಹೋಟೆಲ್‌ನಲ್ಲಿ ಮಾಡುವ ಊಟ ಖಾನವಳಿಯಲ್ಲಿ ಮಾಡಿದರೇ ₹100 ರಿಂದ ₹150 ತೆಗೆದುಕೊಳ್ಳುತ್ತಾರೆ. ಹಣ ಇಲ್ಲದಿದ್ದರೆ ನಾಳೆ ಕೊಡು ಎನ್ನುತ್ತಾರೆ. ಗಂಗಾವತಿಯಲ್ಲಿ ಸಾಕಷ್ಟು ಹೋಟೆಲ್, ಖಾನಾವಳಿಗಳಿದ್ದು ಇಲ್ಲಿನ ಊಟ ತುಂಬಾ ರುಚಿಯಾಗಿರುತ್ತದೆ ಮಂಜುನಾಥ, ಹಮಾಲಿ ಕೆಲಸಗಾರ, ಗಂಗಾವತಿ ನಮ್ಮ ತಾಯಿ ತನಗಿಲ್ಲದಿದ್ದರೂ ಬೇರೆಯವರಿಗೆ ಊಟ ಕೊಡುತ್ತಿದ್ದಳು. ಸತ್ತ ನಂತರ ನಮ್ಮ ಹಿಂದೆ ಏನೂ ಬರುವುದಿಲ್ಲ. ಹೀಗಾಗಿ ತಾಯಿ ಹಾಕಿದ ಹಾದಿಯಲ್ಲೇ ಸಾಗುತ್ತಾ ನಾಲ್ವರಿಗೆ ಕಡಿಮೆ ಬೆಲೆಗೆ ಹೊಟ್ಟೆ ತುಂಬ ಊಟ ನೀಡುವ ಕಾಯಕ ಮಾಡುತ್ತಿದ್ದೇನೆ,
ಜಯಮ್ಮ, ಹೊಟೇಲ್ ಮಾಲಕಿ
ಜಯಮ್ಮ ಅವರ ಹೋಟೆಲ್‌ನಲ್ಲಿ ಮಾಡುವ ಊಟ ಖಾನವಳಿಯಲ್ಲಿ ಮಾಡಿದರೇ ₹100 ರಿಂದ ₹150 ತೆಗೆದುಕೊಳ್ಳುತ್ತಾರೆ. ಹಣ ಇಲ್ಲದಿದ್ದರೆ ನಾಳೆ ಕೊಡು ಎನ್ನುತ್ತಾರೆ. ಗಂಗಾವತಿಯಲ್ಲಿ ಸಾಕಷ್ಟು ಹೋಟೆಲ್, ಖಾನಾವಳಿಗಳಿದ್ದು ಇಲ್ಲಿನ ಊಟ ತುಂಬಾ ರುಚಿಯಾಗಿರುತ್ತದೆ