ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌-19 ವೈರಸ್ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ

ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷರ ಸೂಚನೆ
Last Updated 11 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿಕೋವಿಡ್‌-19 ವೈರಸ್ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಇದುವರೆಗೆ ಜಿಲ್ಲೆಯಲ್ಲಿ ಯಾವುದೇ ರೀತಿಯ ಪ್ರಕರಣ ದಾಖಲಾಗಿಲ್ಲ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿಶ್ವನಾಥ ರೆಡ್ಡಿ ಹೇಳಿದರು.

ಜಿಲ್ಲಾ ಪಂಚಾಯಿತಿ ಜೆ.ಎಚ್.ಪಟೇಲ್ ಸಭಾಂಗಣದಲ್ಲಿಬುಧವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳು ಸೇರಿದಂತೆ) ಪ್ರಗತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಡಾ.ಟಿ.ಲಿಂಗರಾಜಮಾತನಾಡಿ, ಜಿಲ್ಲೆಯ ಮೂಲದವರು ಯಾರಾದರೂ ವಿದೇಶದಿಂದ ಬಂದರೆ ಅಂತವರಲ್ಲಿ ವೈರಸ್‌ ಪತ್ತೆ ಹಚ್ಚಲು ಆರೋಗ್ಯ ಇಲಾಖೆ ವಿವಿಧ ರೀತಿ ಕ್ರಮಗಳನ್ನು ಕೈಗೊಂಡಿದೆ. ಮುಂಜಾಗ್ರತೆ ಕ್ರಮವಾಗಿಜಿಲ್ಲೆಯಲ್ಲಿ 15, ಗಂಗಾವತಿಯಲ್ಲಿ 2, ಯಲಬುರ್ಗಾ 2, ಕುಷ್ಟಗಿಯಲ್ಲಿ 1 ಬೆಡ್ ಹಾಗೂ ಲ್ಯಾಬ್ ಮತ್ತುಮಾಸ್ಕ್‌ ಮೀಸಲಿಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಫೆಬ್ರುವರಿ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ 112 ಡೆಂಗು ಪ್ರಕರಣ ದಾಖಲಾಗಿವೆ ಎಂದು ವಿವರಿಸಿದರು.

ಕುಡಿಯುವ ನೀರು:ಗ್ರಾಮೀಣ ಕುಡಿಯುವ ನೀರಿನ ಯೋಜನೆಯಲ್ಲಿ ಪ್ರಗತಿ ಕಂಡು ಬರುತ್ತಿಲ್ಲ. ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಗೆ ಯಾವುದೇ ಸಮಸ್ಯೆ ಆಗದಂತೆ ಜಾಗೃತಿ ವಹಿಸಿ. ಮುಂದಿನ ತಿಂಗಳಿಂದ ಪ್ರತಿಯೊಂದು ಇಲಾಖೆಗೆ ಭೇಟಿ ನೀಡಲಿದ್ದೇನೆ. ಯಾವುದೇ ಸಮಸ್ಯೆಗಳಿದ್ದರೂ ಕೂಡಲೆ ಪರಿಹಾರ ಕಂಡುಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಪೂರೈಕೆ ಕುರಿತು ವರದಿ ಸಲ್ಲಿಸಬೇಕು ಎಂದುಅಧ್ಯಕ್ಷರು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕೃಷಿ:ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬಾನಾ ಶೇಖ್‌ ಮಾತನಾಡಿ, ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಶೇ 0.5ರಷ್ಟು ಎಣ್ಣೆ ಗಾಣಆರಂಭಿಸುವ ಯೋಜನೆಗೆ ಸಹಾಯಧನ ನೀಡಲಾಗುತ್ತದೆ. ಇದರ ಲಾಭದಲ್ಲಿ ಶೇ 75ರಷ್ಟು ರೈತರಿಗೆ ಸಬ್ಸಿಡಿ ನೀಡಲಾಗುವುದು. ಶೇ 25ರಷ್ಟು ಲಾಭವೂ ದೊರೆಯುತ್ತದೆ. ರೈತರುಎಲ್ಲ ರೀತಿಯ ಎಣ್ಣೆ ಉತ್ಪಾದಿಸುವ ಬೀಜಗಳನ್ನು ಹಾಕಿ ಬೆಳೆಯಬಹುದು. ಅಲ್ಲದೆ ಗುಣಮಟ್ಟದ ಬೀಜಗಳನ್ನು ತಯಾರಿಸಿ ಅವುಗಳ ಬೆಲೆಯನ್ನು ತಾವೇ ನಿರ್ಧರಿಸಬಹುದು. ಅಂದಾಜು 1 ಕೆಜಿ ತೈಲಕ್ಕೆ 300 ರಂತೆ ಮಾರುಕಟ್ಟೆಗೆ ನೀಡಬಹುದು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ರೈತ ಸಂಪರ್ಕ ಕೇಂದ್ರದಲ್ಲಿ ದೊರೆಯಲಿದ್ದು, ರೈತರು ಅಲ್ಲಿಂದ ಮಾಹಿತಿ ಪಡೆದುಕೊಳ್ಳಬಹುದು ಎಂದು ಹೇಳಿದರು.

ಹಿಂಗಾರು-ಮುಂಗಾರು ಬೆಳೆ ಬೆಳೆಯುವ ರೈತರು ತಮ್ಮ ಮೂಲ ಬೆಳೆಯ ಕುರಿತು ಬೆಳೆ ದರ್ಶಕಆಪ್ ಮೂಲಕ ಸಲ್ಲಿಸಬಹುದು. ಈ ಕುರಿತು ಕೃಷಿ ಇಲಾಖೆ ರೈತರ ಸರ್ವೇ ನಂಬರ್ ಆಧಾರಿಸಿ ಬೆಳೆ ವಿಮೆ ನೀಡಲು ಸಹಾಯವಾಗುತ್ತದೆ ಎಂದು ಹೇಳಿದರು.

ಶಾಲೆಗಳಿಗೆ ಸೌಕರ್ಯ: ಎಲ್ಲ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಶೌಚಾಲಯದ ವ್ಯವಸ್ಥೆ ಕಲ್ಪಿಸಿಬೇಕು. ಅನುದಾನಿತ ವಸತಿ ಶಾಲೆಗಳಲ್ಲಿ ವಿದ್ಯುತ್ ಕಂಬ, ಪರಿಕರ, ಪೂರೈಕೆ ಕುರಿತು ಮೇಲಿಂದ ಮೇಲೆ ಜೆಸ್ಕಾಂ ಅಧಿಕಾರಿಗಳು ನಿಗಾ ವಹಿಸಬೇಕು. ಅಗತ್ಯ ಸೌಕರ್ಯಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಲ್ಪಿಸಬೇಕು. ಅನುದಾನಿತ ಶಾಲೆಗಳಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು 15 ದಿನಗಳಲ್ಲಿ ಪೂರ್ಣಗೊಳಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ರಘುನಂದನ್ ಮೂರ್ತಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT