ಗಂಗಾವತಿ: ಉತ್ತರ ಭಾರತ ಯಾತ್ರಾಸ್ಥಳಗಳ ದರ್ಶನದ ಪ್ರವಾಸ ಕೈಗೊಂಡಿದ್ದ ನಗರದ ವಿವಿಧ ಕುಟುಂಬಗಳ 15 ಜನ ಸದಸ್ಯರ ಪ್ರವಾಸಿಗರ ತಂಡ ಉತ್ತರಾಖಂಡ ಪ್ರವಾಹದಿಂದ ಪಾರಾಗಿ ಸುರಕ್ಷಿತವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಗರದ ರಾಯ್ಕರ್, ಕಾಗಲ್ಕರ್ ಎಂಬ ಎರಡು ಕುಟುಂಬಗಳ ಒಟ್ಟು 15 ಜನ ಸದಸ್ಯರಿರುವ ತಂಡ ಉತ್ತರ ಭಾರತ ಯಾತ್ರಾ ಸ್ಥಳಗಳ ವೀಕ್ಷಣೆಗಾಗಿ ಜೂ. 16ರಂದು ನಗರದಿಂದ ಹೊರಟು 18ಕ್ಕೆ ಮಥುರಾ ಸೇರಿಕೊಂಡಿದ್ದರು.

ಬಳಿಕ ಉತ್ತರಾಖಂಡ ರಾಜ್ಯದ ಆಗ್ರಾ, ಹರಿದ್ವಾರ, ಋಷಿಕೇಶಗಳಿಗೆ ತೆರಳಿ ಅಲ್ಲಿಂದ ಕೇದರನಾಥ, ರುದ್ರಪ್ರಯಾಗ, ಗೋವಿಂದಾಘಾಟ್, ಮೊದಲಾದ ಪ್ರವಾಸಿ ಸ್ಥಳಗಳಿಗೆ ಹೋಗುವ ಉದ್ದೇಶ ತಂಡ ಹೊಂದಿತ್ತು ಎಂದು ತಿಳಿದು ಬಂದಿದೆ.

ಉತ್ತರಾಖಂಡದ ಬಹುತೇಕ ಜಿಲ್ಲೆಗಳಲ್ಲಿ ಅಕಾಲಿಕ ಸುರಿಯುತ್ತಿರುವ ಕುಂಭದ್ರೋಣ ಮಳೆಯ ಮಾಹಿತಿ ದೊರೆಯುತ್ತಿದ್ದಂತಯೆ ಯಾತ್ರೆಗೆ ವಿದಾಯ ಹೇಳಿ ಎಲ್ಲರೂ ತವರಿಗೆ ವಾಪಾಸಾಗುತ್ತಿದ್ದಾರೆ. ಈಗಾಗಲೆ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ಕುಟುಂಬ ಸದಸ್ಯ ಅಶೋಕ ರಾಯ್ಕರ್ ತಿಳಿಸಿದ್ದಾರೆ.

ಅನಿಲ್ಕುಮಾರ, ಅನಿತಾ, ಚಾಂದಿನಿ, ಹರೀಶ್, ವೈಷ್ಣವಿ, ರವಿರಾಜ, ವಾಸಂತಿಬಾಯಿ, ರೇಶ್ಮಾ, ವಸುಂಧರಾ, ನಾಗಾರ್ಜುನ, ನಿರ್ಮಲ, ಗೀತಾ, ವಿನಯ್ ಕುಮಾರ, ಲಕ್ಷ್ಮಿಬಾಯಿ ಹಾಗೂ ಕುಮಾರಿ ಸ್ವಾತಿ ತಂಡದಲ್ಲಿದ್ದರು. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ರಾಯ್ಕರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.