ಸೋಮವಾರ, ಅಕ್ಟೋಬರ್ 18, 2021
26 °C
ಸರ್ಪಸಂಸ್ಕಾರ, ಆಶ್ಲೇಷ ಬಲಿಗೆ ಅವಕಾಶ

ಕುಕ್ಕೆ ಸುಬ್ರಹ್ಮಣ್ಯ: ಸೇವೆಗಳು ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ಎಲ್ಲ ಸೇವೆಗಳನ್ನು ನಿಗದಿತ ಸಂಖ್ಯೆಯಲ್ಲಿ ನಡೆಸಲು ಮತ್ತು ಕೋವಿಡ್‌ ಮುಂಜಾಗ್ರತೆಯೊಂದಿಗೆ ಭಕ್ತರ ಮುಕ್ತ ಪ್ರವೇಶಕ್ಕೆ ಅನುಮತಿ ನೀಡಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ದಿನಕ್ಕೆ 100 ಸರ್ಪ ಸಂಸ್ಕಾರ, 20 ನಾಗಪ್ರತಿಷ್ಠೆ, 4 ಪಂಚಾಮೃತ ಅಭಿಷೇಕಕ್ಕೆ ಅವಕಾಶ ನೀಡಲಾಗಿದೆ. ಪ್ರತಿ ಸೇವೆಯಲ್ಲಿ ಇಬ್ಬರಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಆಶ್ಲೇಷ ಬಲಿ ಸೇವೆಯು ಪ್ರತಿ ದಿನ ನಾಲ್ಕು ಪಾಳಿಗಳಲ್ಲಿ ನಡೆಯಲಿದ್ದು, ಒಂದು ಪಾಳಿಯಲ್ಲಿ 70 ಸೇವೆಗಳಿಗೆ ಅವಕಾಶ ನೀಡಲಾಗಿದೆ. ಆಶ್ಲೇಷ ಬಲಿಯು ಬೆಳಿಗ್ಗೆ 7ರಿಂದ 8.15, 8.30ರಿಂದ 9.45, 10ರಿಂದ 11.15 ಹಾಗೂ ಸಂಜೆ 5ರಿಂದ 6.30ರ ಸಮಯದಲ್ಲಿ ನಡೆಯಲಿದೆ. 

2020ರಿಂದ ಮುಂಗಡ ಬುಕ್ಕಿಂಗ್ ಆಗಿರುವ ಸರ್ಪಸಂಸ್ಕಾರ ಸೇವಾ ಭಕ್ತರಿಗೆ ಆದ್ಯತೆ ನೀಡಲಾಗಿದೆ. ಸರ್ಪ ಸಂಸ್ಕಾರ ಸೇರಿದಂತೆ ಪ್ರಮುಖ ಸೇವೆಗಳಲ್ಲಿ ಭಾಗವಹಿಸುವ ವ್ಯಕ್ತಿಗಳು ಕೋವಿಡ್‌ ತಡೆ ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣ ಪತ್ರ ಮತ್ತು ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಸಲ್ಲಿಸುವುದು ಕಡ್ಡಾಯಗೊಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.