ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15ರಂದು ಕುವೆಂಪು ವಿಶ್ವವಿದ್ಯಾಲಯ ಘಟಿಕೋತ್ಸವ

Last Updated 13 ಫೆಬ್ರುವರಿ 2019, 12:48 IST
ಅಕ್ಷರ ಗಾತ್ರ

ಶಿವಮೊಗ್ಗ: ಶಂಕರಘಟ್ಟದ ಜ್ಞಾನಸಹ್ಯಾದ್ರಿ ಆವರಣದಲ್ಲಿ ಫೆ.15ರಂದು ಕುವೆಂಪು ವಿಶ್ವವಿದ್ಯಾಲಯದ 29ನೇ ಘಟಿಕೋತ್ಸವ ನಡೆಯಲಿದೆ.

ಅಂದು ಬೆಳಿಗ್ಗೆ 11ಕ್ಕೆ ಘಟಿಕೋತ್ಸವ ಆರಂಭವಾಗುತ್ತದೆ. ರಾಜ್ಯಪಾಲರು ಈ ಬಾರಿ ಹಾಜರಾಗುವುದಿಲ್ಲ. ವಿಶ್ವವಿದ್ಯಾಲಯದ ಸಮ ಕುಲಾಧಿಪತಿಗಳಾದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಘಟಿಕೋತ್ಸವ ಉದ್ಘಾಟಿಸಲಿದ್ದಾರೆ. ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್‌ ನಿರ್ದೇಶಕ ಡಾ.ಎಸ್.ಸಿ.ಶರ್ಮ ಭಾಗವಹಿಸುವರು ಎಂದು ಕುಲಪತಿ ಪ್ರೊ.ಜೋಗನ್‌ಶಂಕರ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

64 ವಿದ್ಯಾರ್ಥಿಗಳಿಗೆ 112 ಸ್ವರ್ಣಪದಕ:

ಈ ಬಾರಿ 64 ವಿದ್ಯಾರ್ಥಿಗಳು 112 ಸ್ವರ್ಣ ಪದಕ ಹಂಚಿಕೊಂಡಿದ್ದಾರೆ. ಅವರಲ್ಲಿ 15 ಪುರುಷರು ಹಾಗೂ 49 ಮಹಿಳೆಯರು. ಕನ್ನಡ ವಿಭಾಗದಲ್ಲಿ ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜು ವಿದ್ಯಾರ್ಥಿನಿ ನೇತ್ರಾವತಿ 7 ಸ್ವರ್ಣ ಪದಕ ಹಾಗೂ ಒಂದು ನಗದು ಬಹುಮಾನ ಪಡೆದಿದ್ದಾರೆ. ವಿಶ್ವವಿದ್ಯಾಲಯದ ಎನ್.ಆಲಿ ಅಹಮ್ಮದ್ (ರಸಾಯನ ಶಾಸ್ತ್ರ) 5 ಸ್ವರ್ಣ ಪದಕ, ಎಚ್.ವಿ.ಅನೂಷಾ (ಜೈವಿಕ ತಂತ್ರಜ್ಞಾನ) 4 ಸ್ವರ್ಣ ಪದಕ ಹಾಗೂ ಒಂದು ನಗದು ಬಹುಮಾನ ಪಡೆದಿದ್ದಾರೆ. ವಿಮೋಚನಾ, ಪ್ರಿಯಾಂಕಾ, ಚೈತ್ರಾ, ಆದಿತ್ಯ ಇವರು ತಲಾ 4 ಸ್ವರ್ಣ ಪದಕ, ವಿಮಲಾ ಎಂ.ಆರ್, ಮೂರು ಸ್ವರ್ಣ ಪದಕ, ಎರಡು ನಗದು ಬಹುಮಾನ, ಅಮ್ರಿನ್ ಬಾನು 3 ಸ್ವರ್ಣ ಪದಕ, ಒಂದು ನಗದು ಬಹುಮಾನ ಪಡೆದಿದ್ದಾರೆ. ಜಿ.ಒ.ಸಂದ್ಯಾ, ಬಿ.ಮೇಘನಾ, ಎನ್.ಹೀನಾ ತಲಾ 3 ಸ್ವರ್ಣ ಪದಕ ಪಡೆದಿದ್ದಾರೆ ಎಂದು ವಿವರ ನೀಡಿದರು.

ವಿಶ್ವವಿದ್ಯಾಲಯ ವ್ಯಾಪ್ತಿಯ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಕಾಲೇಜುಗಳ 3,805 ಪುರುಷರು ಹಾಗೂ 8,291 ಮಹಿಳೆಯರು ಸೇರಿ 12,096 ವಿದ್ಯಾರ್ಥಿಗಳು ಪದವಿಗೆ ಅರ್ಹರಾಗಿದ್ದಾರೆ. ದೂರಶಿಕ್ಷಣದ ಮೂಲಕ 7,176 ಪುರುಷರು, 8,175 ಮಹಿಳೆಯರು ಸೇರಿ ಒಟ್ಟು 15,351 ವಿದ್ಯಾರ್ಥಿಗಳು ಪದವಿ ಅರ್ಹರಾಗಿದ್ದಾರೆ. ಎರಡೂ ವಿಭಾಗಗಳಿಂದ 27,447 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಈ ಬಾರಿ ಮಹಿಳೆಯರೇ ಹೆಚ್ಚು ಪದವಿ ಪಡೆದಿದ್ದಾರೆ. ಶೇಕಡಾವರು ಫಲಿತಾಂಶ ನೋಡಿದರೆ ದೂರ ಶಿಕ್ಷಣದ ಮೂಲಕ ಪರೀಕ್ಷೆ ಬರೆದವರು ಹೆಚ್ಚು ಉತ್ತೀರ್ಣರಾಗಿದ್ದಾರೆ ಎಂದು ಒಪ್ಪಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಎಚ್.ಎಸ್.ಬೋಜಾನಾಯ್ಕ, ಪರಿಕ್ಷಾಂಗ ಕುಲಸಚಿವ ರಾಜಾನಾಯ್ಕ, ಹಣಕಾಸು ಅಧಿಕಾರಿ ಹಿರೇಮಣಿ ನಾಯ್ಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT