ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ್ಮನಿಯಲ್ಲಿ ಹಿಟ್ಲರ್ ಮಾಡಿದ್ದೇ ಭಾರತದಲ್ಲೂ ಆಗುತ್ತಿದೆ: ಸಸಿಕಾಂತ್ ಸೆಂಥಿಲ್‌

ಪೌರತ್ವ ಕುರಿತ ಸಂವಾದ ಕಾರ್ಯಕ್ರಮ
Last Updated 15 ಜನವರಿ 2020, 12:24 IST
ಅಕ್ಷರ ಗಾತ್ರ

ಶಿವಮೊಗ್ಗ: ಜರ್ಮನಿಯಲ್ಲಿಹಿಟ್ಲರ್ ಮಾಡಿದ ಕೆಲಸವನ್ನೇ ಈಗಭಾರತದಲ್ಲಿಮಾಡಲಾಗುತ್ತಿದೆ. ಭಾವನಾತ್ಮಕ ವಿಷಯಗಳನ್ನೇ ಮುಂದೆ ಮಾಡಿ ಜನರನ್ನು ಭ್ರಮೆಯಲ್ಲಿ ತೇಲಿಸಲಾಗುತ್ತಿದೆ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್‌ ದೂರಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಸ್ವರಾಜ್ ಇಂಡಿಯಾ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಬುಧವಾರ ಹಮ್ಮಿಕೊಂಡಿದ್ದ ಭಾರತೀಯ ಸಂವಿಧಾನ ಮತ್ತುಪೌರತ್ವ ಕಾಯ್ದೆ ಕುರಿತಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾವನಾತ್ಮಕ ವಿಷಯಗಳನ್ನೇ ವಿಜೃಂಭಿಸುತ್ತಾಜನರ ತಲೆ ತಿರುಗಿಸಿ ಗುಂಡಿಯಲ್ಲಿ ಬೀಳಿಸಲಾಗುತ್ತಿದೆ.ನೋಟ್‌ ರದ್ದತಿ, ಜಿಎಸ್‌ಟಿ ಜಾರಿ, ಉದ್ಯೋಗ ನಷ್ಟ, ಕಪ್ಪು ಹಣ ಇಂತಹ ವಿಷಯಗಳನ್ನು ಹೇಳುತ್ತಾ ಜನರ ದಾರಿ ತಪ್ಪಿಸಲಾಗುತ್ತಿದೆ. ಅಭಿವೃದ್ಧಿ ವಿಷಯಗಳು ಗೌಣವಾಗಿವೆ. ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಸಿಎಎ, ಎನ್‌ಪಿ‌ಆರ್ ಮತ್ತು ಎನ್‌ಆರ್‌ಸಿ ಜಾರಿಗೊಳಿಸುವ ಮೂಲಕತುರ್ತು ಪರಿಸ್ಥಿತಿ ನಿರ್ಮಾಣಮಾಡಲಾಗಿದೆ ಎಂದು ಆರೋಪಿಸಿದರು.

ರಾಜಕೀಯ ಚದುರಂಗದಾಟದಲ್ಲಿಅಧಿಕಾರ ಹಿಡಿಯಲು ಹಲವು ತಂತ್ರಗಳ ಪ್ರಯೋಗ ನಡೆಯುತ್ತಿದೆ. ಹಿಂದೆ ಚುನಾವಣೆ ನಡೆಯುವಾಗಮತಪೆಟ್ಟಿಗೆಗಳನ್ನೇ ವಶಪಡಿಸಿಕೊಳ್ಳುತ್ತಿದ್ದರು.ಹಣ ಮತ್ತು ಶಕ್ತಿ ಮೂಲಕ ಚುನಾವಣೆ ನಡೆಯುತ್ತಿತ್ತು.ಅಂತಹ ಹಣ ಬಲ, ಶಕ್ತಿ ಪ್ರಯೋಗ ಎಷ್ಟು ದಿನ ನಡೆದಿವೆ ಎಂದು ಪ್ರಶ್ನಿಸಿದರು.

ಹಿಡಂನ್‌ ಅಜೆಂಡಾ ಹೊಂದಿರುವ ಮೋದಿ, ಅಮಿತ್ ಶಾ ಗುಜರಾತ್‌ನ ಅಹಮದಾಬಾದ್ ಕಾರ್ಪೊರೇಷನ್ ಬ್ಯಾಂಕ್‌ ಚುನಾವಣೆಮೂಲಕ ಅಧಿಕಾರದ ಮೆಟ್ಟಿಲು ಏರಿದರು.ಜನರಭಾವನೆಗಳ ಜತೆ ಚೆಲ್ಲಾಟವಾಡಿ ಚುನಾವಣೆ ಗೆಲ್ಲುತ್ತಾ ಬಂದರು. 100 ಜನರ ಮಧ್ಯೆಪ್ರವೇಶಿಸಿ, ಗುಂಪು ವಿಭಜಿಸುವಲ್ಲಿ ಯಶಸ್ವಿಯಾದರು.ಗೋಧ್ರಾ ಅವರಿಗೆ ಉತ್ತಮ ವೇದಿಕೆ ಒದಗಿಸಿತು. ನಿತ್ಯವೂ ತಮ್ಮ ಕುರಿತು ಸುದ್ದಿ ಬಿತ್ತರವಾಗುವಂತೆ ನೋಡಿಕೊಂಡರು.ಫ್ಯಾಸಿಸಂ ನಾಯಕತ್ವ ಮುಂದುವರಿಸಿದರು ಎಂದು ಟೀಕಿಸಿದರು.

ದೇಶ, ದೇಶಭಕ್ತಿ ಅವರಿಗೆ ಜನರ ಭಾವನೆಗಳನ್ನು ಕೆರಳಿಸುವ ಫಾರ್ಮುಲಾ. ದೇಶದ ಹೆಸರಲ್ಲಿ ಕಪ್ಪು ಹಣವಿರುದ್ಧ ಸಮರ ಸಾರಿದರು. ವಿದೇಶದ ಹಣ ತರಲು ಸಾಧ್ಯವಾಗದಿದ್ದಾಗ ದೇಶದ ನೋಟುಗಳನ್ನೇ ರದ್ದು ಮಾಡಿದರು. ನೋಟು ರದ್ದತಿಯ ಪರಿಣಾಮ ಅಂಬಾನಿಯ ಹಣ ಹೋಗಲಿಲ್ಲ. ಬವಣೆ ಅನುಭವಿಸಿದ್ದು, ಪ್ರಾಣ ಕಳೆದುಕೊಂಡಿದ್ದು ಸಾಮಾನ್ಯ ಜನರು ಎಂದುಆಕ್ರೋಶ ವ್ಯಕ್ತಪಡಿಸಿದರು.

ಪಾಕಿಸ್ತಾನ್, ಆತಂಕವಾದ್, ಹಿಂದೂ ಪದಗಳನ್ನು ಬಿಟ್ಟು ಮಾತನಾಡಲು ಅವರಿಗೆ ಬೇರೆ ವಿಷಯಗಳೇ ಇಲ್ಲ.ಪೌರತ್ವ ಕಾಯ್ದೆ ಜಾತಿ, ಧರ್ಮ ಹೆಸರಲ್ಲಿಜಾರಿಗೆ ತರುವ ಕುರಿತು ಚರ್ಚೆನಡೆದಿತ್ತು. ಈಗ ಬಲವಂತವಾಗಿ ತಲಾಗುತ್ತಿದೆ. ಮೇಲು ನೋಟಕ್ಕೆ ಈ ಕಾಯ್ದೆ ಮುಸ್ಲಿಂ ವಿರೋಧಿಯಂತೆ ಕಂಡರೂ, ಇದು ಸಂಪೂರ್ಣ ಭಾರತೀಯರ ವಿರೋಧಿ ಎಂದು ವಿಶ್ಲೇಷಿಸಿದರು.

ಪ್ರಧಾನಿ ಮೋದಿ ಸಿದ್ಧಗಂಗಾ ಮಠಕ್ಕೆ ಬಂದರೂ, ಅಲ್ಲಿನ ಮಕ್ಕಳ ಎದುರು ರಾಜಕೀಯ ಮಾತನಾಡುತ್ತಾರೆ. ಅಭಿವೃದ್ಧಿ ವಿಚಾರಗಳ ಬಗ್ಗೆ ತುಟಿಬಿಚ್ಚುವುದಿಲ್ಲ ಎಂದು ಕುಟುಕಿದರು.

ಸ್ವರಾಜ್ ಇಂಡಿಯಾ ಜಿಲ್ಲಾ ವಕ್ತಾರ ಕೆ.ಪಿ.ಶ್ರೀಪಾಲ್ ಪ್ರಸ್ತಾವಿಕ ಮಾತನಢಿದರು.ದಸಂಸ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಅಧ್ಯಕ್ಷತೆ ವಹಿಸಿದ್ದರು.ರೈತ ಮುಖಂಡ ಕಡಿದಾಳು ಶಾಮಣ್ಣ, ಸಮಾಜವಾದಿ ಹೋರಾಟಗಾರ ಪುಟ್ಟಯ್ಯ, ವಕೀಲ ಶಿರಾಜ್ ಮುಜಾಹಿದ್‌ ಸಿದ್ಧಿಕಿ, ಮಾಲತೇಶ್ ಬೊಮ್ಮನಕಟ್ಟೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT