ನಾಗಮಂಗಲ: ರಸ್ತೆ ಬದಿ ಬೈಕ್ನಲ್ಲಿದ್ದ ವ್ಯಕ್ತಿಗೆ ಕಾರೊಂದು ಡಿಕ್ಕಿಯಾಗಿ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಾಲ್ಲೂಕಿನ ದೇವಲಾಪುರ ಹೋಬಳಿ ಕಸಲಗೆರೆ ಸಮೀಪ ಭಾನು ವಾರ ಘಟನೆ ನಡೆದಿದ್ದು, ಕಸಲಗೆರೆ ಮುದ್ದಣ್ಣ ಅವರ ಪುತ್ರ ಅರ್ಚಕ ಚಂದ್ರಣ್ಣ (50) ಮೃತಪಟ್ಟವರು.

ಕಲಸಗೆರೆಯ ಬಸವರಾಜು ಎಂಬವರು ಬೆಂಗಳೂರಿನಿಂದ ಬೇರೆಯವರ ರೇಂಜ್ ರೋವರ್ ಕಾರು ತೆಗೆದುಕೊಂಡು ಬಂದಿದ್ದು, ಭಾನುವಾರ ವಾಪಾಸಾಗುವಾಗ ಮದ್ಯಪಾನ ಮಾಡಿ ವೇಗವಾಗಿ ಕಾರು ಚಾಲನೆ ಮಾಡುತ್ತಿದ್ದರು. ನಿಯಂತ್ರಣ ತಪ್ಪಿ ರಸ್ತೆಬದಿಯ ಮರಕ್ಕೆ ಡಿಕ್ಕಿ ಹೊಡೆದು ಬಳಿಕ ಚಂದ್ರಣ್ಣ ಅವರಿಗೆ ಡಿಕ್ಕಿಯಾಗಿದೆ.

ಗ್ರಾಮಸ್ಥರು ಚಾಲಕ ಬಸವರಾಜು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಗ್ರಾಮಾಂತರ ಪೊಲೀಸರು ಮೃತದೇಹವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪಿಎಸ್ಐ ಸತೀಶ್ ಮತ್ತು ಸಿಪಿಐ ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.