ಸೋಮವಾರ, ಅಕ್ಟೋಬರ್ 26, 2020
23 °C

ಮದ್ಯ ಸೇವಿಸಿ ಕಾರು ಚಾಲನೆ, ಡಿಕ್ಕಿ: ಇಬ್ಬರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ಪೇಟೆ: ಮದ್ಯ ಸೇವನೆ ಮಾಡಿ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಭಾನುವಾರ ತಾಲ್ಲೂಕಿನ ಎರಡು ಕಡೆ ಬೈಕ್‌ಗಳಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಇಬ್ಬರು ಮೃತಪಟ್ಟು ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಘಟನೆಯಲ್ಲಿ ಪಟ್ಟಣದ ಜಯನಗರ ಬಡಾವಣೆಯ ಸತೀಶ್(40), ಅನುವಿನಕಟ್ಟೆ-ಕೆರೆಕೋಡಿ ನಿವಾಸಿ ಪ್ರಭಾಕರ್(42) ಮೃತಪಟ್ಟಿದ್ದಾರೆ. ಮಂಡ್ಯದ ತಾವರೆಕೆರೆ ನಿವಾಸಿ ಕಿರಣ್‌ಕುಮಾರ್ ಎಂಬಾತ ಮದ್ಯ ಸೇವನೆ ಮಾಡಿ ಮಂಡ್ಯ ಕಡೆಯಿಂದ ತನ್ನ ಹೊಸ ಕಾರು ಓಡಿಸಿಕೊಂಡು ಕೆ.ಆರ್‌.ಪೇಟೆ ಕಡೆಗೆ ಬರುವಾಗ ಘಟನೆ ನಡೆದಿದೆ. ಹೊನ್ನೇನಹಳ್ಳಿ ಗೇಟ್‌ ಬಳಿ ಬೈಕ್‌ನಲ್ಲಿ ಬರುತ್ತಿದ್ದ ಸತೀಶ್ ಹಾಗೂ ಪ್ರಭಾಕರ್ ಅವರಿಗೆ ಕಿರಣ್‌ಕುಮಾರ್‌ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ.

ನಂತರ ಪಟ್ಟಣದ ಎಲ್.ಐ.ಸಿ. ಕಚೇರಿ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದ ಶಿವು ಎಂಬುವವರಿಗೆ ಮತ್ತೆ ಡಿಕ್ಕಿ ಹೊಡೆಡಿದ್ದಾನೆ. ಅಲ್ಲಿಂದಲೂ ಪರಾರಿಯಾಗಲು ಯತ್ನಿಸಿದಾಗ ಸಾರ್ವಜನಿಕರು ಆತನನ್ನು ಹಿಡಿದು, ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಹೊನ್ನೇನಹಳ್ಳಿ ಗೇಟ್‌ ಬಳಿ ತೀವ್ರವಾಗಿ ಗಾಯಗೊಂಡಿದ್ದ ಸತೀಶ್‌ ಹಾಗೂ ಪ್ರಭಾಕರ್‌ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ, ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲು ಮಾಡಲಾಯಿತು. ಚಿಕಿತ್ಸೆಗೆ ಸ್ಪಂದಿಸದೇ ಇಬ್ಬರೂ ಮೃತಪಟ್ಟಿದ್ದಾರೆ. ಎಲ್‌ಐಸಿ ಕಚೇರಿ ಬಳಿ ಗಾಯಗೊಂಡಿದ್ದ ಶಿವು ತೀವ್ರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಬ್‌ಇನ್‌ಸ್ಪೆಕ್ಟರ್‌ ಬ್ಯಾಟರಾಯಗೌಡ ಆರೋಪಿ ಆರೋಪಿ ಕಿರಣ್‌ಕುಮಾರ್‌ನನ್ನು ಬಂಧಿಸಿ, ಕಾರು ಜಪ್ತಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.