ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ವಕೀಲರ ಪ್ರತಿಭಟನೆ, ಸಂಘಟನೆಗಳ ಸಭೆ

Last Updated 13 ಏಪ್ರಿಲ್ 2022, 4:59 IST
ಅಕ್ಷರ ಗಾತ್ರ

ಮಂಡ್ಯ: ‘ಜಿಲ್ಲಾ ನ್ಯಾಯಾಲಯಕ್ಕೆ ಮಂಜೂರಾಗಿರುವ 2.30 ಎಕರೆ ಭೂಮಿ ಯನ್ನು ಜಿಲ್ಲಾಡಳಿತ ಕೂಡಲೇ ಹಸ್ತಾಂತರಿಸಬೇಕು’ ಎಂದು ಒತ್ತಾಯಿಸಿ ವಕೀಲರ ಸಂಘದ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು
ಪ್ರತಿಭಟಿಸಿದರು.

ಇದೇ ವೇಳೆ, ಭೂಮಿಯನ್ನು ನ್ಯಾಯಾಲಯ ನಿರ್ಮಾಣಕ್ಕೆ ನೀಡ ಬಾರದು ಎಂಬ ಒತ್ತಾಯದೊಂದಿಗೆ ವಿವಿಧ ಸಂಘಟನೆಗಳ ಮುಖಂಡರು, ಜನಪ್ರತಿನಿಧಿಗಳು ನಗರದಲ್ಲಿರುವ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಸಭೆ ನಡೆಸಿದರು.

‘ತೋಟಗಾರಿಕೆ ಇಲಾಖೆಯ ಜಮೀನು ಮಂಜೂರಾಗಿ ಹಲವು ತಿಂಗಳಾಗಿದ್ದರೂ ಹಸ್ತಾಂತರವಾಗಿಲ್ಲ. ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಜಾಗದ ಕೊರತೆ ಇದ್ದು ಕಲಾಪಕ್ಕೆ
ತೊಂದರೆಯಾಗುತ್ತಿದೆ.ಸರ್ಕಾರ ಬಿಡುಗಡೆ ಮಾಡಿರುವ ಹಣವೂ ವಾಪಸ್‌ ಹೋಗುತ್ತಿದೆ’ ಎಂದು ವಕೀಲರ ಸಂಘದ ಅಧ್ಯಕ್ಷ
ಎಂ.ಟಿ.ರಾಜೇಂದ್ರ ಅಸಮಾಧಾನ
ವ್ಯಕ್ತಪಡಿಸಿದರು.

‘ನಗರದ ಹೃದಯ ಭಾಗದಲ್ಲಿ ಸುಂದರ ಹಸಿರು ವಾತಾವರಣ ಸೃಷ್ಟಿ ಸಿರುವ ತೋಟಗಾರಿಕೆ ಇಲಾಖೆಯ ಒಂದಿಂಚೂ ಭೂಮಿಯನ್ನು ಅನ್ಯ ಉದ್ದೇಶಕ್ಕೆ ನೀಡಬಾರದು. ತೋಟ ಗಾರಿಕೆ ಆಸ್ತಿ ಉಳಿಸಿಕೊಳ್ಳಲು ಜಿಲ್ಲೆ ಯಾದ್ಯಂತ ಹೋರಾಟ ರೂಪಿಸ ಲಾಗಿದ್ದು ಜಿಲ್ಲೆಯ ಎಲ್ಲಾ ಸಂಘಟನೆಗಳು ಕೈಜೋಡಿಸಬೇಕು. ಯಾವುದೇ ಪರ್ಯಾಯ ಭೂಮಿಯಲ್ಲಿ ಕೋರ್ಟ್‌ ನಿರ್ಮಾಣಕ್ಕೆ ಭೂಮಿ ಕೊಡಲಿ’ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದರು. ಜೆಡಿಎಸ್‌ ಮುಖಂಡ ಜಿ.ಬಿ.ಶಿವಕುಮಾರ್‌, ರೈತ ನಾಯಕಿ ಸುನಂದಾ ಜಯರಾಂ ಇದ್ದರು.

‘ಪ್ರಜಾವಾಣಿ’ಯಲ್ಲಿ ಮಂಗಳವಾರ ‘ಕ್ಯಾಂಟೀನ್‌, ಕಾರ್‌ಶೆಡ್‌ನಲ್ಲಿ ಕೋರ್ಟ್‌ ಕಾರ್ಯಕಲಾಪ’ ವಿಶೇಷ ವರದಿ
ಪ್ರಕಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT