ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ, ಜೆಡಿಎಸ್‌ನ 30 ಮಂದಿ ಕಾಂಗ್ರೆಸ್‌ಗೆ; ಚಲುವರಾಯಸ್ವಾಮಿ

Published 26 ಜನವರಿ 2024, 15:17 IST
Last Updated 26 ಜನವರಿ 2024, 15:17 IST
ಅಕ್ಷರ ಗಾತ್ರ

ಮಂಡ್ಯ: ‘ಬಿಜೆಪಿ, ಜೆಡಿಎಸ್‌ನ ಕನಿಷ್ಠ 30 ಮಂದಿ ಕಾಂಗ್ರೆಸ್‌ ಪಕ್ಷ ಸೇರಲು ಸಿದ್ಧರಾಗಿದ್ದಾರೆ. ಅವರನ್ನು ಯಾವ ಸಂದರ್ಭದಲ್ಲಿ ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಚಿಂತಿಸಲಾಗುತ್ತಿದೆ, ಈ ಬಗ್ಗೆ ಶೀಘ್ರವೇ ನಿರ್ಣಯ ಪ್ರಕಟಿಸಲಾಗುವುದು’ ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಸೇರುತ್ತಿರುವ ನಾಯಕರ ಹೆಸರು ಹೇಳಿದರೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರಿಗೆ ಆಘಾತವಾಗುತ್ತದೆ. ನಾವೇನೂ ಆಪರೇಷನ್‌ ಹಸ್ತ ಮಾಡುತ್ತಿಲ್ಲ; ನಮ್ಮ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ನಾಯಕರು ಸೇರ್ಪಡೆ ಆಗಲಿದ್ದಾರೆ’ ಎಂದರು.

ನಾಟಿ ಶೈಲಿಯಲ್ಲಿ ಚುನಾವಣೆ: ‘ಸಂಸದೆ ಸುಮಲತಾ ಅವರನ್ನು ಕಾಂಗ್ರೆಸ್‌ ಸೇರುವಂತೆ ನಾವು ಕರೆದಿಲ್ಲ, ಯಾರು ಕರೆದಿದ್ದಾರೆಯೋ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಬಿಜೆಪಿ ಅಭ್ಯರ್ಥಿಯಾಗಲು ಬಯಸುತ್ತೇನೆ ಎಂದು ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್‌ನಿಂದ ಒರಿಜಿನಲ್‌ ನಾಟಿ ಬ್ರೀಡ್‌ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ. ಅವರು ಎಲ್ಲಿಂದಲೋ ಬಂದ ಫಾರಂ ಬ್ರೀಡ್‌ ಆಗಿರುವುದಿಲ್ಲ. ಮಂಡ್ಯ ನಾಟಿ ಶೈಲಿಯಲ್ಲಿ ಚುನಾವಣೆ ಎದುರಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

‘ಜಗದೀಶ ಶೆಟ್ಟರ್‌ ಬಿಜೆಪಿಗೆ ಸೇರ್ಪಡೆ ಆಗಿರುವುದರಿಂದ ಕಾಂಗ್ರೆಸ್‌ಗೆ ನಷ್ಟವೇನೂ ಆಗುವುದಿಲ್ಲ. ನಾವು ಅವರನ್ನು ಕರೆದಿರಲಿಲ್ಲ. ಅವರಾಗೇ ಬಂದಿದ್ದರು, ಈಗ ಅವರಾಗಿಯೇ ಬಿಟ್ಟು ಹೋಗಿದ್ದಾರೆ. ಲಕ್ಷ್ಮಣ ಸವದಿ ಕಾಂಗ್ರೆಸ್‌ ಬಿಡುವುದಿಲ್ಲ, ಆದರೆ, ಬಿಜೆಪಿ ಮುಖಂಡರು ಅವರ ಮೇಲೂ ಒತ್ತಡ ಹಾಕುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT