ಮಳವಳ್ಳಿ: ಉಗ್ರಾಣದ ಬಾಡಿಗೆ ನಿಗದಿಪಡಿಸಲು ಟೆಂಡರ್‌ದಾರರಿಂದ ₹ 20 ಸಾವಿರ ಲಂಚ ಪಡೆಯುವಾಗ ಪಟ್ಟಣದ ಎಪಿಎಂಸಿ ಪ್ರಭಾರ ಕಾರ್ಯದರ್ಶಿ ಕೆ.ಸಿ.ಸಾಕಮ್ಮ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದರು.
ತಾಲ್ಲೂಕಿನ ಕಲ್ಕುಣಿ ಗ್ರಾಮದ ಆನಂದ್ ಅವರು ಎಪಿಎಂಸಿ ಉಪವಿಭಾಗದ ಕಿರುಗಾವಲು ಕೇಂದ್ರದ ಉಗ್ರಾಣದ ಟೆಂಡರ್ ಪಡೆದಿದ್ದರು. ಕಡಿಮೆ ಬಾಡಿಗೆ ನಿಗದಿಪಡಿಸಲು ಕೆ.ಸಿ.ಸಾಕಮ್ಮ ಅವರು ₹ 50 ಸಾವಿರ ಲಂಚ ಕೇಳಿದ್ದು, ₹ 20 ಸಾವಿರಕ್ಕೆ ಒಪ್ಪಿದ್ದರು. ಆನಂದ್ ಮಂಡ್ಯದ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಎಪಿಎಂಸಿ ಕಚೇರಿಯಲ್ಲಿ ಸಿಬ್ಬಂದಿ ಸಿದ್ದರಾಜು ಮೂಲಕ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಡಿವೈಎಸ್ಪಿ ಎಚ್.ಟಿ.ಸುನೀಲ್ ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳು ಮಂಗಳವಾರ ಇಬ್ಬರನ್ನೂ ಬಂಧಿಸಿದರು. ರಾಮನಗರ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಪುಟ್ಟಮಾದಯ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.