ಶನಿವಾರ, ಮೇ 28, 2022
30 °C

ಎಟಿಎಂ ಯಂತ್ರ ಕತ್ತರಿಸಿ ₹20.60 ಲಕ್ಷ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮದ್ದೂರು: ಇಲ್ಲಿನ ಮೈಸೂರು–ಬೆಂಗಳೂರು ಹೆದ್ದಾರಿಯ ಕೆಎಸ್‌ಆರ್‌ಟಿಸಿ ಡಿಪೊ ಬಳಿ ಇರುವ ಎಸ್‌ಬಿಐ ಶಾಖೆಯ ಎಟಿಎಂ ಯಂತ್ರವನ್ನು ಸೋಮವಾರ ರಾತ್ರಿ ಗ್ಯಾಸ್‌ ಕಟರ್‌ ಬಳಸಿ ಕತ್ತರಿಸಿರುವ ದುಷ್ಕರ್ಮಿಗಳು ₹20.60 ಲಕ್ಷ ದೋಚಿದ್ದಾರೆ.

ಬೆಳಿಗ್ಗೆ ಗ್ರಾಹಕರೊಬ್ಬರು ಎಟಿಎಂಗೆ ಹೋದಾಗ ವಿಷಯ ಗೊತ್ತಾಗಿದೆ. ಎಟಿಎಂನಲ್ಲಿ ಸೆಕ್ಯೂರಿಟಿ ಗಾರ್ಡ್‌ ಇರಲಿಲ್ಲ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು.

10 ತಿಂಗಳ ಹಿಂದೆ ಪಟ್ಟಣದ ಕೊಲ್ಲಿ ವೃತ್ತದಲ್ಲಿರುವ ಎಸ್‌ಬಿಐ ಶಾಖೆಯ ಎಟಿಎಂನಲ್ಲೂ ಇದೇ ರೀತಿಯಲ್ಲಿ ಕಳವು ಮಾಡಿದ್ದು, ಆರೋಪಿಗಳು ಪತ್ತೆಯಾಗಿಲ್ಲ. ಎಟಿಎಂಗೆ ಹಣ ಹಾಕುವ ಹಿಟಾಚಿ ಏಜೆನ್ಸಿಯ ವ್ಯವಸ್ಥಾಪಕ ಮೂರ್ತಿ ಮದ್ದೂರು ಠಾಣೆಗೆ ದೂರು ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು