ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾನೇ 5 ವರ್ಷ ಸಿಎಂ ಎನ್ನುವುದು ಅನಾರೋಗ್ಯಕರ: ಎಸ್‌.ಎಂ.ಕೃಷ್ಣ

Published 3 ನವೆಂಬರ್ 2023, 20:40 IST
Last Updated 3 ನವೆಂಬರ್ 2023, 20:40 IST
ಅಕ್ಷರ ಗಾತ್ರ

ಮದ್ದೂರು (ಮಂಡ್ಯ ಜಿಲ್ಲೆ): ‘ಜಾತಿ ಆಧಾರದಲ್ಲಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಜೊತೆಗೆ, ನಾನೇ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಹೇಳುವುದೂ ಅನಾರೋಗ್ಯಕರ ಬೆಳವಣಿಗೆ’ ಎಂದು ಬಿಜೆಪಿ ಮುಖಂಡ ಎಸ್‌.ಎಂ.ಕೃಷ್ಣ ಶುಕ್ರವಾರ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವೈಯಕ್ತಿಕ ಸಾಧನೆ, ಯೋಗ್ಯತೆ, ಸಾಮಾಜಿಕ ಕಳಕಳಿ ಇರುವವರು ಮುಖ್ಯಮಂತ್ರಿಯಾಗಬೇಕು. ಜಾತಿ ಆಧಾರದ ಮೇಲೆ ಅವಕಾಶ ಪಡೆಯುವುದು ಪ್ರಜಾಪ್ರಭುತ್ವದ ಅಣಕ. ಪ್ರತಿ ರಾಜಕೀಯ ಕಾಲಘಟ್ಟದಲ್ಲಿ ತಿರುವುಗಳಿರುತ್ತವೆ, ಅದನ್ನು ಆಧರಿಸಿ ಸ್ಥಾನಗಳ ಬದಲಾವಣೆಯಾಗುತ್ತವೆ’ ಎಂದರು.

‘ನಾನೇ ಐದು ವರ್ಷ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಹೇಳುವ ಅನಾರೋಗ್ಯಕರ ಕಾಲಘಟ್ಟಕ್ಕೆ ನಾವಿಂದು ತಲುಪಿದ್ದೇವೆ. ಈಗ ಈ ಪ್ರಶ್ನೆ ಉದ್ಬವಿಸುವ ಅವಶ್ಯಕತೆಯೇ ಇರಲಿಲ್ಲ. ಉನ್ನತ ಸ್ಥಾನದಲ್ಲಿರುವವರು ಇತಿಮಿತಿ ಇಟ್ಟುಕೊಂಡು ಮಾತನಾಡಿದರೆ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ’ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ‘ನಾನೇ 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT