ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಣಗಿದ್ದ ಮರ ಉರುಳಿ ಪೌರಕಾರ್ಮಿಕ ಸಾವು

Last Updated 10 ಫೆಬ್ರುವರಿ 2023, 13:35 IST
ಅಕ್ಷರ ಗಾತ್ರ

ಮಂಡ್ಯ: ನಗರದ ತಾವರೆಗೆರೆ, ಚೆಲುವಯ್ಯ ಉದ್ಯಾನದ ಬಳಿ ಒಣಗಿದ ಮರವೊಂದು ರಸ್ತೆಗೆ ಉರುಳಿ ಬೈಕ್‌ನಲ್ಲಿ ತೆರಳುತ್ತಿದ್ದ ಪೌರಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.

ನಗರಸಭೆಯಲ್ಲಿ ಪೌರಕಾರ್ಮಿಕರಾಗಿದ್ದ ಉದಯ್‌ ಕುಮಾರ್‌ (31) ಮೃತಪಟ್ಟವರು. ಗುರುವಾರ ರಾತ್ರಿ 9 ಗಂಟೆ ವೇಳೆಯಲ್ಲಿ ಪತ್ನಿ ಹಾಗೂ ಮಗಳೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಉದ್ಯಾನದ ಬಳಿಯ ಮರವೊಂದು ಉದಯ್‌ ಅವರ ತಲೆ ಮೇಲೆ ಬಿದ್ದಿದೆ. ತೀವ್ರ ರಕ್ತಸ್ರಾವವಾದ ಕಾರಣ ಅವರು ಮೃತಪಟ್ಟಿದ್ಧಾರೆ. ಪತ್ನಿ ಹಾಗೂ ಮಗಳಿಗೂ ಗಾಯಗಳಾಗಿವೆ. ಪೂರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೌರ ಕಾರ್ಮಿಕರ ಪ್ರತಿಭಟನೆ: ಚೆಲುವಮ್ಮ ಉದ್ಯಾನದ ಬಳಿ ಒಣಗಿ ಬಾಗಿದ್ದ ಮರ ತೆರವು ಮಾಡುವಂತೆ ಕೋರಿ ನಗರಸಭೆ ಅರಣ್ಯ ಇಲಾಖೆಗೆ ಪತ್ರ ಬರೆದಿತ್ತು. ಸಾಮಾನ್ಯ ಸಭೆಯಲ್ಲೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮರ ತೆರವು ಮಾಡುವಂತೆ ಒತ್ತಡ ಹಾಕಿತ್ತು. ಆದರೂ ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಮರದ ತೆರವು ಮಾಡಿರಲಿಲ್ಲ.

ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ದೋರಣೆ ಖಂಡಿಸಿ ನಗರಸಭೆ ಪೌರ ಕಾರ್ಮಿಕರು ಶುಕ್ರವಾರ ಶವಾಗಾರದ ಮುಂದೆ ಪತ್ರಿಭಟನೆ ನಡೆಸಿದರು. ಪೌರ ಕಾರ್ಮಿಕನ ಸಾವಿಗೆ ₹ 50 ಲಕ್ಷ ಪರಿಹಾರ ನೀಡುವಂತೆ ಒತ್ತಾಯ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT