‘ಗೋವಿಂದರಾಜು ಬ್ಯಾಂಕ್‌ನಲ್ಲಿ ಪಡೆದಿದ್ದ ಸಾಲ ತೀರಿಸಲು ಜಮೀನು ಮಾರಾಟ ಮಾಡಿದ್ದರು. ಆದರೂ ವಿವಿಧ ಸಂಘ, ಸಂಸ್ಥೆಗಳು ಹಾಗೂ ವ್ಯಕ್ತಿಗಳಿಂದ ಪಡೆದಿದ್ದ ₹3 ಲಕ್ಷಕ್ಕೂ ಹೆಚ್ಚು ಸಾಲ ಉಳಿದಿತ್ತು. ಸಾಲಗಾರರ ಕಿರುಕುಳ ಹೆಚ್ಚಾದ ಕಾರಣ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಗೋವಿಂದರಾಜು ಅವರ ಪತ್ನಿ ನೇತ್ರಾವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.