ಶ್ರೀರಂಗಪಟ್ಟಣ: ವೈದ್ಯರು ಹಾಗೂ ರೋಗಿಗಳ ನಡುವೆ ತಾಯಿ ಮತ್ತು ಮಗುವಿನ ಸಂಬಂಧ ಇದ್ದರೆ ಆರೋಗ್ಯ ಸೇವೆ ಫಲಪ್ರದವಾಗುತ್ತದೆ ಎಂದು ಹಿರಿಯ ವೈದ್ಯ ಡಾ.ಬಿ. ಸುಜಯಕುಮಾರ್ ಹೇಳಿದರು.

ಪಟ್ಟಣದಲ್ಲಿ ಓಂ ಶ್ರೀನಿಕೇತನ ಟ್ರಸ್ಟ್, ಶ್ರೀರಂಗ ಪಾಲಿ ಕ್ಲಿನಿಕ್ ಮತ್ತು ಡಯಾಗ್ನೋಸ್ಟಿಕ್ ಸೆಂಟರ್, ರೋಟರಿ ಶ್ರೀರಂಗಪಟ್ಟಣ ಹಾಗೂ ಉದ್ಯೋಗದಾತ ಫೌಂಡೇಶನ್ ಮಂಗಳವಾರ ಏರ್ಪಡಿಸಿದ್ದ ವೈದ್ಯರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ವೈದ್ಯರ ಬಗ್ಗೆ ಜನರಲ್ಲಿ ಅಪಾರ ಗೌರವ ಭಾವನೆ ಇದೆ. ಅದಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು. ಮಮತೆ, ಪ್ರೀತಿಯಿಂದ ಮಾತನಾಡಿದರೆ ವೈದ್ಯರ ಬಗ್ಗೆ ನಂಬಿಕೆ ಮತ್ತು ವಿಶ್ವಾಸ ಮತ್ತಷ್ಟು ಹೆಚ್ಚುತ್ತದೆ. ವೈದ್ಯರಿಗೆ ನಿವೃತ್ತಿ ಎಂಬುದೇ ಇರುವುದಿಲ್ಲ. ದೈಹಿಕ ಮತ್ತು ಮಾನಸಿಕವಾಗಿ ಚೈತನ್ಯ ಇರುವವರೆಗೆ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು.

ಜೂನ್ 30ರಂದು ನಿವೃತ್ತರಾದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ.ಪಾರ್ವತಿ ಅವರನ್ನು ಸನ್ಮಾನಿಸಲಾಯಿತು.

‘ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವವರಿಗೆ ಬದ್ಧತೆ ಇದ್ದರೆ ಗೌರವ ತನ್ನಿಂತಾನೇ ಸಿಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವವರ ಮೇಲೆ ಹೆಚ್ಚು ಒತ್ತಡ ಇರುತ್ತದೆ. ಅದನ್ನು ನಿಭಾಯಿಸಬೇಕು. ಹಾಗಾದರೆ ತಮ್ಮ ವೃತ್ತಿಯಲ್ಲಿ ಯಶಸ್ವಿಯಾಗಲು ಸಾಧ್ಯ’ ಎಂದು ಡಾ.ಪಾರ್ವತಿ ಹೇಳಿದರು.

ವೈದ್ಯಾಧಿಕಾರಿಗಳಾದ ಡಾ.ಕುಮಾರ್, ಡಾ.ರಾಜು, ಡಾ.ಲಿಖಿತ, ಡಾ.ಲೋಕೇಶ್, ಡಾ.ಧನ್ಯಶ್ರೀ, ಡಾ.ಶ್ರೀನಿವಾಸ್, ಶ್ರೀರಂಗ ಪಾಲಿ ಕ್ಲಿನಿಕ್ ಮತ್ತು ಡಯಾಗ್ನೋಸ್ಟಿಕ್ ಸೆಂಟರ್ ಮುಖ್ಯಸ್ಥ ಶ್ರೀಧರ್ ಹಳೇಬೀಡು, ಅಮಿತ್ಕೃಷ್ಣ, ಡಿ.ಬಿ. ರುಕ್ಮಾಂಗದ, ಕೆ.ಎಸ್. ಜಯಶಂಕರ್, ಸಿ.ಎಸ್. ವೆಂಕಟೇಶ್, ಕೆ.ಶೆಟ್ಟಹಳ್ಳಿ ಅಪ್ಪಾಜಿ, ವನರಾಜು, ಎಂ. ಚಂದ್ರಶೇಖರ್, ಶಿವಕುಮಾರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.