ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ರಾಸಾಯನಿಕ ಬಳಕೆ; ಭೂ ಫಲವತ್ತತೆ ನಾಶ: ಆದಿ ಚುಂಚನಗಿರಿ ಶ್ರೀ

ಆದಿಚುಂಚನಗಿರಿಯಲ್ಲಿ ನಡೆದ ರೈತ ಸಮಾವೇಶದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ
Last Updated 13 ಜನವರಿ 2023, 5:09 IST
ಅಕ್ಷರ ಗಾತ್ರ

ನಾಗಮಂಗಲ: ಜನರು ಕೃಷಿಯಲ್ಲಿ ರಾಸಾಯನಿಕಗಳ ಬಳಕೆ ಮಾಡಲು ಪ್ರಾರಂಭಿಸಿದ ನಂತರ ಭೂಮಿ ತನ್ನ ಫಲವತ್ತತೆ ಕಳೆದುಕೊಂಡು ಬರಡಾ ಗುತ್ತಿದೆ ಎಂದು ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾ ನಂದನಾಥ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಅವರ 78ನೇ ವರ್ಷದ ಜಯಂತೋತ್ಸವ ಮತ್ತು 10ನೇ ವರ್ಷದ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ ಗುರುವಾರ ಆಯೋಜಿಸಿದ್ದ ರೈತ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ ಕೃಷಿಯಲ್ಲಿ ರಾಸಾಯನಿಕ ಗಳನ್ನು ಬಳಕೆ ಮಾಡುವುದೇ ಶಾಪ ಎಂಬ‌ ಮನೋಭಾವ ಜನರಲ್ಲಿತ್ತು. ಆಗ ಭೂಮಿಯೂ ಫಲವತ್ತಾಗಿಯೇ ಇತ್ತು. ಆದರೆ, ಕಾಲ ಕಳೆದಂತೆ ಬಳ ಸುವ ರಾಸಾಯನಿಕಗಳು ಭೂಮಿಯ ಫಲವತ್ತತೆಯೊಂದಿಗೆ ನಮ್ಮ ಆರೋಗ್ಯವನ್ನೂ ಹಾಳು‌ ಮಾಡುತ್ತಿವೆ. ದೇಶದ ಸುಸ್ಥಿತಿಗೆ ಅಲ್ಲಿನ ಜ‌ನರ ಮನಸ್ಸು, ಆರೋಗ್ಯವೂ ಸುಸ್ಥಿತಿಯಲ್ಲಿ ಇರಬೇಕಾಗುತ್ತದೆ. ಪರಿಸರ ಸೇರಿದಂತೆ ವಾತಾವರಣದ ಮೇಲೆ ಮಾನವ ಮಾಡುತ್ತಿರುವ ಶೋಷಣೆಯ ಪರಿಣಾಮ ದಿಂದ ಜಾಗತಿಕ ತಾಪಮಾನ ಮತ್ತು ಹವಾಮಾನದಲ್ಲಿ ಬದಲಾವಣೆಯಾಗಿದೆ. ಇದರಿಂದ ಭವಿಷ್ಯದಲ್ಲಿ ಆಹಾರದ ಅಭಾವ ಉಂಟಾಗುವ ಆತಂಕವೂ ಇದೆ ಎಂದರು.

ಸಾವಯವ ಕೃಷಿಯ ಪ್ರಯೋಜನಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಸಾವಯವ ವಸ್ತುಗಳ ಬಳಕೆ ಹೆಚ್ಚಾದರೆ ಅದನ್ನು ಬೆಳೆಯುವವರ ಸಂಖ್ಯೆಯೂ‌ ಏರಿಕೆಯಾಗಿ ಅವುಗಳ ಬೆಲೆ ಕಡಿಮೆಯಾ ಗುವ ಸನ್ನಿವೇಶ ನಿರ್ಮಾಣವಾಗುತ್ತದೆ. ಈ ಕಾರಣದಿಂದ ಜೀವವೈವಿಧ್ಯ ಕಾಪಾಡಿಕೊಂಡು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಬೇಕಾಗಿದೆ ಎಂದರು.

ಬೆಂಗಳೂರಿನ ಜಿಕೆವಿಕೆ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ವಿ.ಸುರೇಶ್ ಮಾತನಾಡಿ, ಜಗತ್ತಿನಲ್ಲಿರುವ ಮಣ್ಣಿನಲ್ಲಿ ಶೇ 30ರಷ್ಟು ಮಣ್ಣು ಹಾಳಾಗಿದ್ದು, ಶೇ 50ರಷ್ಟು ಮಣ್ಣು ಸತ್ವವನ್ನು ಕಳೆದುಕೊಂಡಿದೆ ಎಂಬ‌ ಅಧ್ಯಯನದ ಮಾಹಿತಿ ಕಳ ವಳಕಾರಿಯಾಗಿದೆ. ಹವಾಮಾನ ವೈಪ ರೀತ್ಯ ಕೃಷಿಯ ಮೇಲೆ ದುಷ್ಪ ರಿಣಾಮ ಬೀರುತ್ತಿವೆ. ಸಾವಯವ ಕೃಷಿ ಪದ್ಧತಿಗೆ ಆದ್ಯತೆ ನೀಡಬೇಕಿದ್ದು, ಕೃಷಿಕರು ಮಣ್ಣಿನ‌ ಫಲವತ್ತತೆ ಕಾಪಾ ಡಲೂ ಪ್ರಾಮುಖ್ಯತೆ ನೀಡಬೇಕು ಎಂದರು.

ರೈತ ಉತ್ಪಾದಕ ಸಂಸ್ಥೆಗಳು‌ ಜಿಲ್ಲಾ, ತಾಲ್ಲೂಕು ಮತ್ತು ಹೋಬಳಿ ಮಟ್ಟಗಳಲ್ಲೂ ರೈತರಿಗೆ ಪೂರಕವಾಗಿ ಕೆಲಸ ಮಾಡಲಿದ್ದು, ಕೃಷಿ ವಿವಿಯು ರೈತರಿಗೆ ಪೂರಕವಾಗಿದೆ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಾವಯವ ಸಿರಿಧಾನ್ಯಗಳ ವರ್ಷವೆಂದು ಘೋಷಣೆ ಮಾಡಲಾಗಿದೆ. ಸಾವಯವ ಕೃಷಿಯ ಬಗ್ಗೆ ಜನರು ಮತ್ತು ರೈತರಲ್ಲಿರುವ ಮನೋಸ್ಥಿತಿಯನ್ನು ಬದಲಾಯಿಸುವ ಅವಶ್ಯಕತೆಯಿದೆಯೇ ಹೊರತು ತಂತ್ರಜ್ಞಾನದ ಕೊರತೆಯಿಲ್ಲ. ಆ ನಿಟ್ಟಿನಲ್ಲಿ ರಾಜ್ಯದ ಮಠಗಳು, ಧಾರ್ಮಿಕ ಕೇಂದ್ರಗಳ ಮೂಲಕ ಜನಜಾಗೃತಿ ಮೂಡಿಸಬೇಕು ಎಂದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಉಮಾಪತಿಗೌಡ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳು ಸಾವಯವ ಕೃಷಿ ಕುರಿತು ಉಪನ್ಯಾಸ, ಕಾರ್ಯಾಗಾರ ನಡೆಸಿಕೊಟ್ಟರು.

ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಜಂಟಿ ಕೃಷಿ ನಿರ್ದೇಶಕ ಅಶೋಕ್, ತಹಶೀಲ್ದಾರ್ ಸ್ವಾಮಿಗೌಡ, ಉಪ ಕೃಷಿ ನಿರ್ದೇಶಕಿ‌ ಮಾಲತಿ, ಮಮತಾ, ಸಹಾಯಕ ಕೃಷಿ ನಿರ್ದೇಶಕ ಜಯರಾಮ ‌ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT