ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ದಾಳಿಗೆ ತೆಂಗು ನಾಶ

Last Updated 14 ಅಕ್ಟೋಬರ್ 2020, 2:47 IST
ಅಕ್ಷರ ಗಾತ್ರ

ಹಲಗೂರು: ಕಾಡಾನೆಗಳ ದಾಳಿಯಿಂದಾಗಿ ಐವತ್ತಕ್ಕೂ ಹೆಚ್ಚು ತೆಂಗಿನ ಗಿಡಗಳು ನಾಶವಾಗಿರುವ ಘಟನೆ ಬಾಳೆಹೊನ್ನಿಗ ವ್ಯಾಪ್ತಿಯ ಭೀಮನ ದೊಡ್ಡಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಕೊನ್ನಾಪುರ ಗ್ರಾಮದ ರಾಮಚಂದ್ರ ಎಂಬುವರು ತಮ್ಮ ಮೂರು ಎಕರೆ ಜಮೀನಿನಲ್ಲಿ ನೂರಾರು ತೆಂಗಿನ ಗಿಡಗಳನ್ನು ಬೆಳೆಸಿದ್ದರು. ಭೀಮನ ಕಂಡಿ ಅರಣ್ಯ ತಪ್ಪಲಿನಿಂದ ಬಂದ ನಾಲ್ಕು ಕಾಡಾನೆಗಳು ತೆಂಗಿನ ಗಿಡಗಳನ್ನು ಮುರಿದು, ಸುಳಿ ತಿಂದು, ತುಳಿದು ಹಾಕಿವೆ. ಜಮೀನಿನಲ್ಲಿ ಬೆಳೆದಿದ್ದ ರಾಗಿ, ಕಡ್ಲೆಕಾಯಿ ಫಸಲನ್ನು ಹಾಳು ಮಾಡಿವೆ.

‘ಎರಡು ವರ್ಷದಿಂದ ಕಷ್ಟಪಟ್ಟು ಮಗುವಿನಂತೆ ತೆಂಗಿನ ಗಿಡಗಳನ್ನು ಬೆಳೆಸಿದ್ದೇವು. ಆದರೆ ಆನೆಗಳ ದಾಳಿಯಿಂದಾಗಿ ಸುಮಾರು ₹ 1 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಕಳೆದ ವರ್ಷ ಆನೆ ದಾಳಿಯಿಂದಾಗಿ ತೆಂಗು ಮತ್ತು ಬಾಳೆ ಬೆಳೆಯಿಂದ ₹ 50 ಸಾವಿರಕ್ಕೂ ಹೆಚ್ಚು ನಷ್ಟವಾಗಿತ್ತು. ಸರ್ಕಾರದ ವತಿಯಿಂದ ಯಾವುದೇ ಪರಿಹಾರ ದೊರಕಿಲ್ಲ’ ಎಂದು ರೈತ ರಾಮಚಂದ್ರ ಸಂಕಟ ಹೇಳಿಕೊಂಡರು.

ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ರೈತ ರಾಮಚಂದ್ರ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT