ಸೋಮವಾರ, ಜೂನ್ 14, 2021
22 °C
ಸೇಬು ಹಣ್ಣಿನ ಬೆಲೆಯಲ್ಲಿ ಇಳಿಕೆ, ತರಕಾರಿ, ಸೊಪ್ಪಿನ ದರ ಸ್ಥಿರ

ಮಂಡ್ಯ: ಹಬ್ಬಕ್ಕೆ ಮೊದಲೇ ಹೂವಿನ ಬೆಲೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಗಣಪತಿ ಹಬ್ಬಕ್ಕೆ ಇನ್ನು ನಾಲ್ಕು ದಿನ ಬಾಕಿ ಇರುವಾಗಲೇ ಹೂವಿನ ಬೆಲೆ ಏರಿಕೆ ಕಂಡಿದ್ದು, ಹಬ್ಬದ ಸಂದರ್ಭದಲ್ಲಿ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ.

ಕಳೆದ ವಾರ ₹60 ಇದ್ದ ಮಾರು ಕನಕಾಂಬರ ₹100, ₹50 ಇದ್ದ ಮಲ್ಲಿಗೆ ₹60, ₹30 ಇದ್ದ ಕಾಕಡ ₹40, ₹40 ಇದ್ದ ಸೇವಂತಿಗೆ ₹50–60 ಆಗಿದೆ. ಗಣಗಲೆ ₹30, ಮರಳೆ ₹40ರಂತೆ ಮಾರಾಟ ಮಾಡಲಾಗುತ್ತಿದೆ.

ಇದಲ್ಲದೆ ಬಿಡಿಹೂವು ಬೆಲೆಯಲ್ಲೂ ಏರಿಕೆ ಕಂಡಿದೆ. ಕಳೆದ ವಾರ ₹500 ಇದ್ದ ಕೆ.ಜಿ.ಕನಕಾಂಬರ ಈ ವಾರ ₹1000, ₹180 ಇದ್ದ ಕೆ.ಜಿ. ಮರಳೆ ₹220, ₹260 ಇದ್ದ ಕಾಕಡ ₹340, ₹120 ಇದ್ದ ಸೇವಂತಿಗೆ ₹160 ಆಗಿದೆ. ಮಲ್ಲಿಗೆ ಬೆಲೆಯಲ್ಲಿ ಇಳಿಕೆ ಕಂಡಿದ್ದರೂ ಮಾರು ಬೆಲೆ ಹೆಚ್ಚಾಗಿದೆ. ಕಳೆದ ವಾರ ₹380 ಇದ್ದ ಮಲ್ಲಿಗೆ ಈ ವಾರ ₹220 ಆಗಿದೆ. ‘ಮಾರುಕಟ್ಟೆಗೆ ಹೂವಿನ ಆವಕ ಕಡಿಮೆ ಬರುತ್ತಿರುವ ಕಾರಣ ಬೆಲೆಯಲ್ಲಿ ಏರಿಕೆ ಕಂಡಿದ್ದು, ಹಬ್ಬಕ್ಕೆ ಇನ್ನೂ ಹೆಚ್ಚಾಗುವ ಸಂಭವ ಇದೆ’ ಎಂದು ಹೂವಿನ ವ್ಯಾಪಾರಿ ಅನಿತಾ ತಿಳಿಸಿದರು.

ಎರಡು ದಿನಗಳ ಹಿಂದೆ ₹80 ಇದ್ದ ಕೆ.ಜಿ ಬೀನ್ಸ್‌ ಬೆಲೆ ₹60ಕ್ಕೆ ಇಳಿದಿದೆ. ಕಳೆದ ವಾರ ₹20 ಇದ್ದ ಬೀಟ್‌ರೂಟ್‌ ₹30, ಸುವರ್ಣಗೆಡ್ಡೆ ₹40ಕ್ಕೆ ಏರಿಕೆಯಾಗಿವೆ. ₹25 ಇದ್ದ ಟೊಮೆಟೊ ₹20ಕ್ಕಿಳಿದಿದೆ. ₹40 ಇದ್ದ ಚೌಳೀಕಾಯಿ ₹50, ₹40 ಇದ್ದ ಹಸಿರುಮೆಣಸಿನಕಾಯಿ ₹60, ₹20 ಇದ್ದ ಬದನೇಕಾಯಿ ₹30, ₹40 ಇದ್ದ ಕ್ಯಾರೆಟ್‌ ₹60, ₹30 ಇದ್ದ ಗೆಡ್ಡೆಕೋಸು ₹40, ದಪ್ಪ ಮೆಣಸಿನಕಾಯಿ ₹60, ಭಜ್ಜಿ ಮೆಣಸಿನಕಾಯಿ ₹80, ಎಲೆಕೋಸು ₹20, ಹೂಕೋಸು ಒಂದಕ್ಕೆ ₹30, ಬೂದುಗುಂಬಳ ₹20, ಹಾಗಲಕಾಯಿ ₹40, ಶುಂಠಿ ₹60, ಬೆಳ್ಳುಳ್ಳಿ ₹100, 3ಕೆ.ಜಿ. ಈರುಳ್ಳಿ ₹50, ಆಲೂಗೆಡ್ಡೆ ₹30, ಹೀರೇಕಾಯಿ ₹40, ಸೌತೇಕಾಯಿ 3ಕ್ಕೆ ₹20, ಮೂಲಂಗಿ ₹20ರಂತೆ ಮಾರಾಟ ಮಾಡಲಾಗುತ್ತಿದೆ.

ಸಣ್ಣ ಗಾತ್ರದ ಕಾಶ್ಮೀರಿ ಸೇಬು ಕೆ.ಜಿ.ಗೆ ₹100 ಆಗಿದ್ದು, ತಳ್ಳುಗಾಡಿಗಳಲ್ಲಿ ಮಾರಲಾಗುತ್ತಿದೆ. ದಪ್ಪ ಗಾತ್ರದ ಸೇಬು ₹120–140 ಹಾಗೂ ಆಸ್ಟ್ರೇಲಿಯಾ ಸೇಬು ₹200ರಂತೆ ಮಾರಲಾಗುತ್ತಿದೆ. ₹100 ಇದ್ದ ಬೀಜ ರಹಿತ ದ್ರಾಕ್ಷಿ ಈ ವಾರ ₹140, ₹80 ಇದ್ದ ಬೀಜಸಹಿತ ದ್ರಾಕ್ಷಿ ₹100 ಆಗಿದೆ. ಕರ್ಬೂಜ ₹40,₹40 ಇದ್ದ ಸಪೋಟ ₹60, ಮೂಸಂಬಿ ₹80ಕ್ಕೆ ಹೆಚ್ಚಾಗಿದೆ. ದಾಳಿಂಬೆ ₹80–100, ಅನಾನಸ್‌ ಒಂದಕ್ಕೆ ₹40, ಕಿತ್ತಳೆ ₹80, ಏಲಕ್ಕಿ ಬಾಳೆಹಣ್ಣು ₹40, ಪಚ್ಚಬಾಳೆ ₹20ರಂತೆ ಮಾರಾಟ ಮಾಡಲಾಗುತ್ತಿದೆ.‌

ಕಳೆದ ವಾರ ₹20 ಇದ್ದ ಕೊತ್ತಂಬರಿ ಸೊಪ್ಪು ₹15, ಕಿಲಕಿರೆ ₹10, ಪುದೀನಾ ₹5, ಸಬ್ಬಸಿಗೆ ₹5, ಮೆಂತೆ ₹10, ದಂಟು ₹10, ಕರಿಬೇವು ₹5, 3 ಕಟ್ಟು ಪಾಲಕ್‌ ₹10 ರಂತೆ ಬಿಕರಿಯಾಗುತ್ತಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು