ಶ್ರೀರಂಗಪಟ್ಟಣ: ಸ್ಕೂಟರ್ನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ದುಷ್ಕರ್ಮಿಯೊಬ್ಬ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿರುವ ಘಟನೆ ತಾಲ್ಲೂಕಿನ ನೀಲನಕೊಪ್ಪಲು ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ.

ನೀಲನಕೊಪ್ಪಲು ಗ್ರಾಮದ ಮಹೇಂದ್ರ ಅವರ ಪತ್ನಿ ರುಕ್ಮಿಣಿ ಅವರ ಕುತ್ತಿಗೆಯಲ್ಲಿದ್ದ ₹2.75 ಲಕ್ಷ ಬೆಲೆಯ 30 ಗ್ರಾಂ ಚಿನ್ನದ ಸರವನ್ನು ಕಿತ್ತೊಯ್ಯಲಾಗಿದೆ. ಹೊಂಡ ಆ್ಯಕ್ಟಿವಾದಲ್ಲಿ ಬಂದ ಆಗಂತುಕ ಈ ಕೃತ್ಯ ಎಸಗಿದ್ದಾನೆ.

ಟಿ.ಎಂ. ಹೊಸೂರು ಗೇಟ್ನಿಂದ ನೀಲನಕೊಪ್ಪಲಿಗೆ ಹೋಗಲು ವಾಹನಗಳಿಗೆ ಕಾಯುತ್ತ ನಿಂತಿದ್ದ ರುಕ್ಮಿಣಿ ಅವರನ್ನು ಸ್ಕೂಟರ್ಗೆ ಹತ್ತಿಸಿಕೊಂಡು ಮಾರ್ಗ ಮಧ್ಯೆ ಚಿನ್ನದ ಸರ ಅಪಹರಿಸಿದ್ದಾನೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.