ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯದಲ್ಲಿ ಭಾರಿ ಮಳೆ: ತರಕಾರಿ, ಹೂವು, ಸೊಪ್ಪು ದುಬಾರಿ

ಗದ್ದೆಯಲ್ಲೇ ಕೊಳೆತು ಹೋಗುತ್ತಿರುವ ಟೊಮೆಟೊ, ಗಗನಕ್ಕೇರಿದ ಬೀನ್ಸ್‌, ಗೆಡ್ಡೆಕೋಸು ಬೆಲೆ
Published 21 ಮೇ 2024, 14:24 IST
Last Updated 21 ಮೇ 2024, 14:24 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲೆಯಾದ್ಯಾಂತ ಭಾರಿ ಮಳೆ ಸುರಿಯುತ್ತಿರುವ ಕಾರಣ ತರಕಾರಿ, ಸೊಪ್ಪು ಹಾಗೂ ಹೂವು ಗದ್ದೆಯಲ್ಲೇ ಕೊಳೆಯುತ್ತಿವೆ. ಹೀಗಾಗಿ ಇವುಗಳ ಬೆಲೆ ದುಬಾರಿಯಾಗಿದ್ದು ಗ್ರಾಹಕರ ಜೇಬಿಗೆ ಹೊರೆಯಾಗಿದೆ.

ಕಳೆದೊಂದು ತಿಂಗಳಿನಿಂದಲೂ ಬೀನ್ಸ್‌ ಬೆಲೆ ₹200ರ ಗಡಿಯಿಂದ ಕೆಳಗೆ ಇಳಿದಿಲ್ಲ. ಗೆಡ್ಡಕೋಸು ಕೂಡ ₹100ರ ಗಡಿ ದಾಟಿದೆ. ಹಸಿರು ಮೆಣಸಿನಕಾಯಿ ₹120ಕ್ಕೆ ತಲುಪಿದೆ. ಕೊತ್ತಂಬರಿ, ಮೆಂತೆ ಸೊಪ್ಪುಗಳ ಬೆಲೆಯೂ ಏರಿಕೆಯಾಗಿದ್ದು ಪ್ರತಿ ಕಟ್ಟು ₹ 50ರವರೆಗೂ ಮಾರಾಟವಾಗುತ್ತಿವೆ. ಮಲ್ಲಿಗೆ ಹೂ ಒಂದು ಕೆ.ಜಿಗೆ ₹ 1 ಸಾವಿರ ದಾಟಿದ್ದು ಗ್ರಾಹಕರಿಗೆ ಆಶ್ಚರ್ಯ ತರಿಸಿದೆ.

ಇಷ್ಟು ದಿನಗಳಿಂದ ದುಬಾರಿಯಾಗಿದ್ದ ಬೆಳ್ಳುಳ್ಳಿ ಬೆಲೆ ಈಗ ಕೊಂಚ ಇಳಿಕೆ ಕಂಡಿದ್ದು ಪ್ರತಿ ಕೆ.ಜಿ ₹ 300ರಂತೆ ಮಾರಾಟವಾಗುತ್ತಿದೆ. ನುಗ್ಗೇಕಾಯಿ ಬೆಲೆ ಕೂಡ ನಿಯಂತ್ರಣಕ್ಕೆ ಬಂದಿದ್ದು ಕೆ.ಜಿ ₹ 60ರಂತೆ ಮಾರಾಟವಾಗುತ್ತಿದೆ. ಈರುಳ್ಳಿ ಬೆಲೆಯೂ ಕೊಂಚ ಇಳಿಕೆ ಕಂಡಿದ್ದು ₹ 100ಕ್ಕೆ 5 ಕೆ.ಜಿ ದೊರೆಯುತ್ತಿದೆ.

ಮಂಗಳೂರು ಸೌತೆ, ಸಿಹಿಗುಂಬಳ ₹20, ಈರುಳ್ಳಿ ₹25, ಬಜ್ಜಿಮೆಣಸಿನಕಾಯಿ, ಎಲೆಕೋಸು, ಟೊಮೆಟೊ ₹30, ಸೀಮೆಬದನೆಕಾಯಿ, ಹೂಕೋಸು, ಈರೇಕಾಯಿ, ಮೂಲಂಗಿ, ಬೆಂಡೆಕಾಯಿ, ಸಿಹಿಗೆಣಸು, ಸೋರೆಕಾಯಿ, ಆಲೂಗೆಡ್ಡೆ ₹40, ಸೌತೆಕಾಯಿ, ಕ್ಯಾರೆಟ್‌, ಹಾಗಲಕಾಯಿ, ಗೋರಿಕಾಯಿ, ಸುವರ್ಣಗೆಡ್ಡೆ, ಹಸಿಬಟಾಣಿ, ಪಡವಲಕಾಯಿ ₹60ರಂತೆ ಪ್ರತಿ ಕೆ.ಜಿ ಮಾರಾಟವಾಗುತ್ತಿವೆ.

ಫಾರಂಬೀನ್ಸ್‌, ರಾಜ್‌ಈರುಳ್ಳಿ ₹80, ಹಸಿರುಮೆಣಸಿನಕಾಯಿ ₹ 120, ಫಾರಂ ಬೀನ್ಸ್‌ ₹130, ಫಾರಂ ಬೆಳ್ಳುಳ್ಳಿ ₹140, ನಾಟಿ ಬೀನ್ಸ್‌ ₹200, ನಾಟಿ ಬೆಳ್ಳುಳ್ಳಿ ₹300ರಂತೆ ಮಾರಾಟವಾಗುತ್ತಿವೆ. ನಿಂಬೆಹಣ್ಣಿಗೆ ಒಂದಕ್ಕೆ ₹8 ರಿಂದ ₹10ಕ್ಕೆ ಮಾರಾಟವಾಗುತ್ತಿದೆ.

ಸೊಪ್ಪುಗಳಲ್ಲಿ ಕೊತ್ತಂಬರಿ ಸೊಪ್ಪಿನ ಬೆಲೆ ದುಬಾರಿಯಾಗಿದೆ, ಇನ್ನುಳಿದಂತೆ ಕೀರೆ, ಸಬ್ಬಸಿಗೆ, ಕರಿಬೇವು, ಪುದಿನಾ, ದಂಟು, ಚಿಕ್ಕಿಸೊಪ್ಪು ₹10, ಮೆಂತೆ, ಫಾರಂ ಕೊತ್ತಂಬರಿ ₹ 50, ಪಾಲಕ್‌ ₹50, ನಾಟಿ ಕೊತ್ತಂಬರಿ ₹60ರಂತೆ ಪ್ರತಿ ಕಟ್ಟಿಗೆ ಮಾರಾಟವಾಗುತ್ತಿವೆ.

ಹೂವಿನ ಬೆಲೆಯಲ್ಲಿ ಹಳದಿ ಮತ್ತು ಕೆಂಪು ಚೆಂಡು ಹೂವು ಕೆ.ಜಿ ₹50, ಸಣ್ಣಗುಲಾಬಿ, ಸುಗಂಧರಾಜ, ಬಟನ್ಸ್‌ ₹150, ಗಣಗಲೆ, ಸೇವಂತಿಗೆ ಮತ್ತು ಬಿಳಿ ಸೇವಂತಿಗೆ ₹200, ಕಲ್ಕತ್ತಾ ಮಲ್ಲಿಗೆ ₹250, ಮರಳೆ ₹500, ಕಾಕಡ ₹600, ಕನಕಾಂಬರ ₹800, ಮಲ್ಲಿಗೆ ₹1 ಸಾವಿರದಂತೆ ಮಾರಾಟ ಮಾಡಲಾಗುತ್ತಿದೆ.

ಮಾರು ತುಳಸಿ ₹30, ಹಳದಿ ಮತ್ತು ಕೆಂಪು ಚೆಂಡು ಹೂವು ₹40, ಗಣಗಲೆ ₹50, ಕಾಕಡ, ಬಟನ್ಸ್‌, ಕನಕಾಂಬರ, ಮರಳೆ ₹80, ಮಲ್ಲಿಗೆ ₹100, ಬಿಳಿ ಸೇವಂತಿಗೆ, ಸೇವಂತಿಗೆ ₹120ರಂತೆ ಮಾರಾಟ ಮಾಡಲಾಗುತ್ತಿದೆ.

ಮಾವಿನ ಹಣ್ಣುಗಳ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರೂ ಖರೀದಿಗೆ ಜನರು ಹೆಚ್ಚು ಆಸಕ್ತಿ ತೋರಿಸುತ್ತಿರಲಿಲ್ಲ. ಮಳೆ ಬಿದ್ದ ನಂತರ ಮಾವಿನ ಹಣ್ಣು ಖರೀದಿಗೆ ಜನರು ಮುಂದಾಗುತ್ತಾರೆ. ಆದರೂ ಮಾವಿನ ಹಣ್ಣಿನ ಬೆಲೆ ಏರಿಕೆಯಾಗಿರುವ ಕಾರಣ ಜನರು ಹೆಚ್ಚು ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ‘ಮಾವಿನ ಇಳುವರಿ ಕಡಿಮೆಯಾಗಿರುವ ಕಾರಣ ಬೆಲೆ ಹೆಚ್ಚಾಗಿದೆ’ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಪಪ್ಪಾಯ, ಕಲ್ಲಂಗಡಿ ₹30, ಪಚ್ಚಬಾಳೆ ₹40, ಏಲಕ್ಕಿಬಾಳೆ ₹ 40– 50, ಕರಬೂಜ, ಸೀಬೆ ₹60, ಕಿತ್ತಳೆ ₹150, ಮೂಸಿಂಬೆ ₹80, ಕಪ್ಪು ದ್ರಾಕ್ಷಿ, ಕಿವಿಹಣ್ಣು(ಬಾಕ್ಸ್‌) ₹120, ಶರತ್‌ದ್ರಾಕ್ಷಿ ₹200, ಡ್ರ್ಯಾಗನ್‌ ಫ್ರೂಟ್ ₹220, ದಾಳಿಂಬೆ ₹240, ಆಸ್ಟ್ರೇಲಿಯಾ ಸೇಬು ₹250, ರಾಯಲ್‌ ಗಾಲ ಸೇಬು ₹325ರಂತೆ ಮಾರಾಟ ಮಾಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT