ಶನಿವಾರ, ನವೆಂಬರ್ 16, 2019
21 °C
ಅವಿಶ್ವಾಸ ಗೊತ್ತುವಳಿ ಮಂಡಿಸಿದ ಸದಸ್ಯರು:ಅಂಗೀಕಾರ

ಹಿರೇಮರಳಿ ಗ್ರಾ.ಪಂ: ಅಧ್ಯಕ್ಷೆ, ಉಪಾಧ್ಯಕ್ಷೆ ಪದಚ್ಯುತಿ

Published:
Updated:
Prajavani

ಪಾಂಡವಪುರ: ತಾಲ್ಲೂಕಿನ ಹಿರೇಮರಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ವಿರುದ್ಧ  ಸದಸ್ಯರು ಸೋಮವಾರ ಉಪ ವಿಭಾಗಾಧಿಕಾರಿ ವಿ.ಆರ್.ಶೈಲಜಾ ಅಧ್ಯಕ್ಷತೆಯಲ್ಲಿ  ನಡೆದ ಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಲಾಯಿತು.

ಒಟ್ಟು 20 ಮಂದಿ ಸದಸ್ಯರನ್ನು ಹೊಂದಿರುವ ಪಂಚಾಯಿತಿಯಲ್ಲಿ  ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸುತ್ತಿಲ್ಲ. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ 18 ಮಂದಿ ಸದಸ್ಯರು ಸಹಿ ಮಾಡಿ ಸೆ. 18ರಂದು ಉಪವಿಭಾಗಾಧಿಕಾರಿಗಳಿಗೆ ಅವಿಶ್ವಾಸ ಗೊತ್ತುವಳಿ ಪತ್ರವನ್ನು ಸಲ್ಲಿಸಿದ್ದರು.

ಸಭೆಯಲ್ಲಿ ಸದಸ್ಯರು ಕೈ ಎತ್ತುವ ಮೂಲಕ ಅವಿಶ್ವಾಸ ಗೊತ್ತುವಳಿ ಮಂಡಿಸಿದರು. ಅಧ್ಯಕ್ಷೆ ಎಸ್.ಹೇಮಾವತಿ ಹಾಗೂ ಉಪಾಧ್ಯಕ್ಷೆ ಚಂದ್ರಕಲಾ ಸಭೆಗೆ ಗೈರು ಹಾಜರಾಗಿದ್ದರು. ಅವಿಶ್ವಾಸ ಗೊತ್ತುವಳಿಯನ್ನು ಸ್ವೀಕರಿಸಿದ ಉಪ ವಿಭಾಗಾಧಿಕಾರಿ ಪದಚ್ಯುತಿಯನ್ನು ಅಂಗೀಕರಿಸಿದರು.

ಸದಸ್ಯರಾದ ಸುನೀಲ್‌ಕುಮಾರ್, ಎಚ್.ಎನ್.ಅಶೋಕ, ಚನ್ನೇಗೌಡ, ಯೋಗೇಶ್‌, ಶಿವಕುಮಾರ್‌, ಲೋಕೇಶ್, ಮಂಗಳಮ್ಮ, ಗೀತಾ, ಲಲಿತಾ, ವಸಂತ, ನಾಗಮ್ಮ, ಕುಮಾರಸ್ವಾಮಿ, ಸವಿತಾ, ಸಿದ್ದಪ್ಪಾಜಿ, ಸುನೀತಾ, ರಾಮಚಂದ್ರ, ಸ್ವಾಮಿಗೌಡ ಹಾಜರಿದ್ದರು.

ಪ್ರತಿಕ್ರಿಯಿಸಿ (+)