ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲುಕೋಟೆ ಬೆಟ್ಟದಲ್ಲಿ ಅಕ್ರಮ ಮನೆ: ತಹಶೀಲ್ದಾರ್ ಮುಂದೆ ಮಹಿಳೆ ಆತ್ಮಹತ್ಯೆ ಪ್ರಹಸನ

Published 16 ಜೂನ್ 2023, 15:58 IST
Last Updated 16 ಜೂನ್ 2023, 15:58 IST
ಅಕ್ಷರ ಗಾತ್ರ

ಮೇಲುಕೋಟೆ: ಯೋಗಾನರಸಿಂಹ ಸ್ವಾಮಿ ಬೆಟ್ಟ ತಪ್ಪಲಿನಲ್ಲಿ ಪ್ರಭಾವಿ ರಾಜಕಾರಣಿಯಿಂದ ಅನಧಿಕೃತ ಮನೆ ನಿರ್ಮಾಣ ಮಾಡಲಾಗಿದ್ದು ತೆರುವು ಕಾರ್ಯಾಚರಣೆ ವೇಳೆ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೈ ಡ್ರಾಮಾ ಮಾಡಿದ ಹಿನ್ನಲೆ ತಹಶೀಲ್ದಾರ್ ಸೌಮ್ಯ ಸ್ಥಳದಿಂದ ಹಿಂತಿರುಗಿದರು.

ಮೇಲುಕೋಟೆ ಯೋಗಾನರಸಿಂಹ ಸ್ವಾಮಿ ಬೆಟ್ಟದಲ್ಲಿ ಬಸವರಾಜು ಎಂಬುವವರು ಅಕ್ರಮವಾಗಿ ಮನೆ ನಿರ್ಮಾಣದ ಮಾಡುತ್ತಿದ್ದಾ ಎಂಬ ದೂರಿನಂತೆ ತಹಶೀಲ್ದಾರ್ ಸೌಮ್ಯ ಕೆಲದಿನಗಳ ಹಿಂದೆ ಸ್ಥಳಕ್ಕೆತೆರಳಿ, ಮನೆ ತೆರವುಗೊಳಿಸುಲು ಸೂಚನೆ ನೀಡಿ, ನೋಟಿಸ್ ನೀಡಿ, ಮನೆ ಬಾಗಿಲಿಗೆ ಬೀಗ ಹಾಕಿದ್ದರು.

ಮನೆ ಮಾಲಿಕರು ಬೀಗ ಒಡೆದುಹಾಕಿ ಮನೆ ನಿರ್ಮಾಣದ ಕೆಲಸ ಪೂರ್ಣಗೊಳಿಸಿ ಮನೆಯಲ್ಲಿ ವಾಸ ಆರಂಭಿಸಿದ್ದರು. ಈ ಮಾಹಿತಿ ತಿಳಿದ ತಹಶೀಲ್ದಾರ್ ಶುಕ್ರವಾರ ಸ್ಥಳಕ್ಕೆ ತೆರಳಿ ಮನೆ ತೆರುವುಗೊಳಿಸಲು ಮುಂದಾದಾಗ ಅಲ್ಲಿದ್ದ ಮಹಿಳೆ ಮನೆ ಒಳಗೆ ತೆರಳಿ ಬಾಗಿಲು ಮುಚ್ಚಿ, ‘ ಕಾರ್ಯಾಚರಣೆ ಸ್ಥಗಿತ ಗೊಳಿಸಿ, ಇಲ್ಲವಾದರೆ ಮನೆಯಲ್ಲಿ ಆತ್ಮಹತ್ಯೆ ಮಾಡುತ್ತೇನೆ’ ಎಂದರು  ಬೆದರಿಕೆ ಹಾಕಿದ್ದರು. ಅಧಿಕಾರಿಗಳು ಬಾಗಿಲು ತೆಗೆಸಲು ಎರಡು ಗಂಟೆ  ಹರಸಾಹಸ ಪಟ್ಟು ಸಂಜೆ ಹಿಂತಿರುಗಿದರು.

ರೈತ ಸಂಘದ ಮುಖಂಡ ದಿಲೀಪ್ ಮಾತನಾಡಿ,  ಅಕ್ರಮ ಮನೆಗೆ ತೆರುವುಗೊಳಿಸಲು ತಹಶೀಲ್ದಾರ್ ನೋಟಿಸ್ ನೀಡಿದ ಮೇಲೂ ಸೆಸ್ಕ್‌  ಅಧಿಕಾರಿಗಳು ವಿದ್ಯುತ್ ಸಂಪರ್ಕ ನೀಡಿದ್ದಾರೆ. ಅಧಿಕಾರಿಗಳು ಹಾಕಿರುವ ಬೀಗ ಒಡೆದು ರಾಜರೋಷವಾಗಿ ಮನೆ ನಿರ್ಮಾಣ ಮಾಡಲಾಗಿದೆ. ಬೆಟ್ಟದ ಕೆಲವು ಕಡೆ  ಇಂತಹ ಪ್ರಯತ್ನ  ನಡೆಯುತ್ತಿದೆ. ಬೆಟ್ಟದ ಪಾರ್ಕಿಂಗ್ ಸ್ಥಳದಲ್ಲಿ ಪಾಯ ತೆಗೆಯಲಾಗಿದೆ. ಅಧಿಕಾರಿಗಳು ಯಾವುದೇ ಅಮಿಷಕ್ಕೆ ಒಳಗಾಗದೆ ಕೆಲಸ ಮಾಡಬೇಕು ಎಂದರು.

ಈ ಸಂಬAಧ ಸುದ್ದಿಗಾರೊಂದಿಗೆ ಮಾತನಾಡಿದ ತಹಶೀಲ್ದಾರ್ ಸೌಮ್ಯ  ಮಾಹಿತಿ ನೀಡಿ, ‘ಮಹಿಳೆ ಮನೆ ಬಾಗಿಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದರು. ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಹಕ್ಕುಪತ್ರ ನೀಡಲಾಗಿದೆ ಎಂದೂ ಹೇಳಿದ್ದಾರೆ. ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT