ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

International Yoga Day: 50 ಆಸನಗಳ ಪ‍್ರದರ್ಶನ

ಜನನಿ, ಭಾರತೀ ವಿದಾ ಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆ
Published 21 ಜೂನ್ 2023, 15:28 IST
Last Updated 21 ಜೂನ್ 2023, 15:28 IST
ಅಕ್ಷರ ಗಾತ್ರ

ಭಾರತೀನಗರ: ಇಲ್ಲಿನ ಜನನಿ ವಿದ್ಯಾ ಸಂಸ್ಥೆ, ಭಾರತೀ ವಿದ್ಯಾಸಂಸ್ಥೆಯಲ್ಲಿ ಸಾಮೂಹಿಕ ಯೋಗಾಸನ ಕಾರ್ಯಕ್ರಮ ನಡೆಯಿತು.

ಜನನಿ ವಿದ್ಯಾ ಸಂಸ್ಥೆಯಲ್ಲಿ ಯೋಗರತ್ನ ಎಂ.ಮಲ್ಲಿಕಾರ್ಜುನಸ್ವಾಮಿ ಯೋಗ ಕಾರ್ಯಕ್ರಮವನ್ನು ನಡೆಸಿಕೊಟ್ಟರು. 50ಕ್ಕೂ ಹೆಚ್ಚು ಆಸನಗಳನ್ನು ಮಾಡುವ ಮೂಲಕ ಯೋಗ ದಿನ ಯಶಸ್ವಿಗೊಳಿಸಿದರು.

ಶಾಸಕ ಕೆ.ಎಂ.ಉದಯ್‌ ಮಾತನಾಡಿ, ‘ಆರೋಗ್ಯ ಕಾಪಾಡಲು ಯೋಗ ಸಹಕಾರಿಯಾಗಲಿದೆ’ ಎಂದರು.

ಬಿಇಟಿ ಕಾರ್ಯದರ್ಶಿ ಬಿ. ಎಂ. ನಂಜೇಗೌಡ, ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ. ಎಸ್. ಬೋರಯ್ಯ, ಶಿಕ್ಷಕ ಸಡಿ.ಚಂದ್ರಶೇಖರ್‌, ಭಾರತೀನಗರ ಗ್ರಾ.ಪಂ, ಪಿಡಿಒ ಸುಧಾ, ಜನನಿ ಸಂಸ್ಥೆಯ ಕಾರ್ಯದರ್ಶಿ ಬಿ. ಕೆ. ಜಗದೀಶ್ ಇದ್ದರು.

ಭಾರತೀ ಎಜುಕೇಷನ್‌ ಟ್ರಸ್ಟ್‌ನ ಜಿ. ಮಾದೇಗೌಡ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಪ್ರಕೃತಿ ಕಾಲೇಜು ಸಹಯೋಗದಲ್ಲಿ ಸಾಮೂಹಿಕ ಯೋಗ ಪ್ರದರ್ಶಿಸಲಾಯಿತು.

ಭಾರತೀ ಹೆಲ್ತ್ ಸೈನ್ಸನಿರ್ದೇಶಕ ತಮೀಜ್ ಮಣಿ ಮಾತನಾಡಿ, ‘ಯೋಗವನ್ನು ನಿರಂತರವಾಗಿ ಮಾಡಬೇಕು. ಕೆಲವರು ಸಾಂದರ್ಭಿಕ ಯೋಗ ಮಾಡುತ್ತಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲ’ ಎಂದು ತಿಳಿಸಿದರು

ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರಾದ ಡಾ.ಸಂತ ಕುಮಾರ್ ಉಪನ್ಯಾಸಕರಾದ ಡಾ.ಅನುಷಾ, ಡಾ.ಮೇಘನಾ, ಡಾ.ಸಿರಿ, ಡಾ.ಪವನನೀತ, ಡಾ.ಸಂಗೀತ್, ಡಾ.ನಿತಿನ್, ಡಾ.ಅಭಿರಾಮಿ, ಡಾ.ಗೌರವ್, ಡಾ.ಆಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT