ಶುಕ್ರವಾರ, ಅಕ್ಟೋಬರ್ 7, 2022
28 °C
ಕಾರ್ಗಿಲ್‌ ಹುತಾತ್ಮರಿಗೆ ಮಂಡ್ಯ ನಗರದ ಗಾಂಧಿ ಭವನದಲ್ಲಿ ದೀಪ ನಮನ

‘ವಿಜಯೋತ್ಸವವೇ ಸೇನೆ ಸೇರಲು ಉತ್ಸಾಹ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಡ್ಯ: ಕಾರ್ಗಿಲ್‌ ವಿಜಯ ದಿವಸವನ್ನು ಹುತಾತ್ಮರಾದ ನಮ್ಮ ಹೆಮ್ಮೆಯ ಸೈನಿಕರಿಗೆ ಸಮರ್ಪಿಸಬೇಕು. ಆ ಮೂಲಕ ಯುವಕರಲ್ಲಿ ಸೇನೆ ಸೇರುವ ಉತ್ಸಾಹ ಹೆಚ್ಚಿಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜುಗೌಡ ಸಲಹೆ ನೀಡಿದರು.

ನಗರದ ಗಾಂಧಿ ಭವನದಲ್ಲಿ ಕಲಾತಪಸ್ವಿ ಟ್ರಸ್ಟ್, ಡಾ.ಈ.ಸಿ.ನಿಂಗರಾಜುಗೌಡ ಫೌಂಡೇಷನ್, ಚಿದಂಬರ ನಟೇಶ ನಾಟ್ಯ ಶಾಲೆ ಬುಧವಾರ ಆಯೋಜಿಸಿದ್ದ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ದೀಪ ನಮನ ಹಾಗೂ ಪ್ರಜಾ ಭಾರತ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ಸೇನೆಯು ಪಾಕಿಸ್ತಾನ ಸೈನಿಕರ ಹುಟ್ಟಡಗಿಸಿದ ಕ್ಷಣವೇ ಕಾರ್ಗಿಲ್ ವಿಜಯ ದಿವಸ ಆಗಿದೆ. ಭಾರತ ಮತ್ತು ಪಾಕಿಸ್ತಾನದ ಯುದ್ಧದ ನಂತರ, ಗಡಿಯಲ್ಲಿನ ಉದ್ವಿಗ್ನತೆ ತೀವ್ರಗೊಂಡಿದ್ದು, ಕೇಂದ್ರ ಸರ್ಕಾರವು ಆಪರೇಷನ್ ವಿಜಯ್ ಪ್ರಾರಂಭಿಸಿ ಜಯದ ಸರಮಾಲೆ ತೊಡಲು ಸಾಧ್ಯವಾಯಿತು. ದೇಶದ ಯುವಕರು ಸೇನೆ ಸೇರುವ ಉತ್ಸಾಹ ಬೆಳೆಸಿಕೊಂಡು, ಈ ವಿಜಯೋತ್ಸವವನ್ನೇ ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದರು.

ಕಲಾತಪಸ್ಸಿ ಟ್ರಸ್ಟ್‌ನಲ್ಲಿ ಚಿತ್ರಕಲಾ ತರಬೇತಿ ಪಡೆಯುವ ವಿದ್ಯಾರ್ಥಿಗಳು ಮತ್ತು ರಾಜ್ಯಮಟ್ಟದ ಚಿತ್ರಕಲೆ ಹಾಗೂ ವೇಷಭೂಷಣ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಸ್ಪರ್ಧಾರ್ಥಿಗಳು, ಪೋಷಕರು ದೀಪಗಳನ್ನು ಉರಿಸಿ ಯೋಧರಿಗೆ ನಮನ ಸಲ್ಲಿಸಿದರು. ವಿಜೇ ತರಿಗೆ ಬಹುಮಾನ ನೀಡಲಾಯಿತು.

ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್‌ ಅಧ್ಯಕ್ಷ ಕೆ.ಟಿ.ಹನುಮಂತು, ಬಜರಂಗಸೇನೆ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್, ಡಾ.ಪೂರ್ಣಿಮಾ, ಕಲಾತಪಸ್ವಿ ಟ್ರಸ್ಟ್ ಕಾರ್ಯದರ್ಶಿ ಅನಿಲ್‌ ಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು