ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ದೂರು: ಮನಸೆಳೆಯುತ್ತಿದೆ ‘ಕೂಸಿನ ಮನೆ’

Published 15 ಫೆಬ್ರುವರಿ 2024, 6:38 IST
Last Updated 15 ಫೆಬ್ರುವರಿ 2024, 6:38 IST
ಅಕ್ಷರ ಗಾತ್ರ

ಮದ್ದೂರು: ಶಿಥಿಲಗೊಂಡು 10 ವರ್ಷದಿಂದ ಬಳಕೆಯಾಗದೇ, ಮುಚ್ಚಿದ ಹೆಮ್ಮನಹಳ್ಳಿಯ ಸರ್ಕಾರಿ ಶಾಲೆಗೆ ಕೊಠಡಿಗೆ ಗ್ರಾಮ ಪಂಚಾಯಿತಿಯಿಂದ ಹೊಸ ಸ್ವರೂಪ ನೀಡುವ ಮೂಲಕ ‘ಕೂಸಿನ ಮನೆ’ಯಾಗಿ ಪರಿವರ್ತಿಸಿದ್ದು, ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದೆ.

ದಶಕದಿಂದ ಶಿಥಿಲಗೊಂಡು ಮೂಲೆಗುಂಪಾಗಿದ್ದ ಕಟ್ಟಡದ ಸದ್ಬಳಕೆಗೆ ಗ್ರಾ.ಪಂ. ಸದಸ್ಯ ನಂದೀಶ್ ಗೌಡ ಚಿಂತಿಸಿದ್ದರು. ಈ ಕುರಿತಂತೆ ಪಿಡಿಒ ಲೀಲಾವತಿ ಅವರ ಬಳಿ ಚರ್ಚಿಸಿ ಸುಮಾರು 8 ತಿಂಗಳ ಹಿಂದೆ ಯೋಜನೆ ರೂಪಿಸಿದರು. ಶಿಕ್ಷಣ ಇಲಾಖೆಗೆ ಪತ್ರ ಬರೆದು ಅನುಮತಿ ಪಡೆದು, ₹4 ಲಕ್ಷ ಖರ್ಚು ಮಾಡಿ ನವೀಕರಿಸಿದರು.

ಅದರ ಪರಿಣಾಮದ ಫಲವಾಗಿ ದಶಕದ ಹಿಂದೆ ಶಿಥಿಲಗೊಂಡು ಮುಚ್ಚಿಹೋಗಿ, ಬಳಕೆಯಾಗದೆ ಇದ್ದ ಸರ್ಕಾರಿ ಶಾಲೆಯ ಕಟ್ಟಡ ಹೊಸದಾಗಿ ವಿನ್ಯಾಸಗೊಂಡು ‘ಕೂಸಿನ ಮನೆ’ಯಾಗಿ ಪರಿವರ್ತನೆಗೊಂಡಿದೆ.  ಸೋಮವಾರ ಮಕ್ಕಳ ಮತ್ತು ಮಹಿಳಾ ಇಲಾಖೆಗೆ ಹಸ್ತಾಂತರಿಸಲಾಯಿತು. ಆ ಮೂಲಕ್ಕೆ ಗ್ರಾಮಕ್ಕೆ ‘ಕೂಸಿನ ಮನೆ’ ಕೇಂದ್ರ ಬಂದಂತಾಗಿದೆ.

ಕಳೆದ ವರ್ಷವೂ ಹೆಮ್ಮನಹಳ್ಳಿ ಗ್ರಾ. ಪಂ ವ್ಯಾಪ್ತಿಯ ಕದಲೀಪುರ ಗ್ರಾಮದ ಸರ್ಕಾರಿ ಶಾಲೆಯು ಸಂಪೂರ್ಣ ಮುಚ್ಚಿ ಹೋಗಿದ್ದರಿಂದ ನಂದೀಶ್ ಗೌಡ, ಪಿಡಿಒ ಲೀಲಾವತಿ ಅವರ ಆಸಕ್ತಿಯಿಂದ ನವೀಕೃತಗೊಂಡು ಹೊಸದಾದ ಅಂಗನವಾಡಿ ಕೇಂದ್ರವಾಗಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಹಿಂದೆ ಶಿಥಿಲಗೊಂಡಿದ್ದ ಹೆಮ್ಮನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಕೊಠಡಿ

ಹಿಂದೆ ಶಿಥಿಲಗೊಂಡಿದ್ದ ಹೆಮ್ಮನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಕೊಠಡಿ

8 ತಿಂಗಳ ಯೋಜನೆ ಜಾರಿಗೆ ಚಿಂತನೆ ₹4ಲಕ್ಷ ವೆಚ್ಚದಲ್ಲಿ ಹೊಸ ಸ್ವರೂಪ ಮುಚ್ಚಿದ ಕಟ್ಟಡಕ್ಕೆ ಹೊಸಕಳೆ
ಹೆಮ್ಮನಹಳ್ಳಿ ಗ್ರಾ. ಪಂ ಅಧ್ಯಕ್ಷ ಅವಧಿ ಸೇರಿದಂತೆ ಗ್ರಾಮಗಳ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕೃಷ್ಣೇಗೌಡ ಟ್ರಸ್ಟ್‌ನಿಂದ ಮೊಟ್ಟೆ ಟಿ.ವಿ ಮೇಜು ಕಂಪ್ಯೂಟರ್ ಬೈಸಿಕಲ್ ಪಠ್ಯ ಪರಿಕರಗಳನ್ನು ನೀಡುತ್ತಿದ್ದೇನೆ.
ನಂದೀಶ್ ಗೌಡ ಹಾಲಿ ಸದಸ್ಯ ಹೆಮ್ಮನಹಳ್ಳಿ ಗ್ರಾ. ಪಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT