ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟಿ–20 ವಿಶ್ವಕಪ್‌ | ನಂದಿನಿ ಲಾಂಛನ ಇರುವ ಜೆರ್ಸಿ ಬಿಡುಗಡೆ ಮಾಡಿದ ಸ್ಕಾಟ್ಲೆಂಡ್

Published 16 ಮೇ 2024, 4:44 IST
Last Updated 16 ಮೇ 2024, 4:44 IST
ಅಕ್ಷರ ಗಾತ್ರ

ಬೆಂಗಳೂರು: ಐಸಿಸಿ ಪುರುಷರ ಟಿ–20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ‘ನಂದಿನಿ’ ಲಾಂಛನ ಇರುವ ನೂತನ ಜೆರ್ಸಿಯನ್ನು ಸ್ಕಾಟ್ಲೆಂಡ್ ಬಿಡುಗಡೆ ಮಾಡಿದೆ.

ಹೊಸ ಜೆರ್ಸಿಯನ್ನು ತೊಟ್ಟಿರುವ ಆಟಗಾರರ ಚಿತ್ರವನ್ನು ಕ್ರಿಕೆಟ್ ಸ್ಕಾಟ್ಲೆಂಡ್‌ ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.

ನೂತನ ಜೆರ್ಸಿಯಲ್ಲಿ ಸ್ಕಾಟ್ಲೆಂಡ್ ಆಟಗಾರರು

ನೂತನ ಜೆರ್ಸಿಯಲ್ಲಿ ಸ್ಕಾಟ್ಲೆಂಡ್ ಆಟಗಾರರು

ಚಿತ್ರ: ಕ್ರಿಕೆಟ್ ಸ್ಕಾಟ್‌ಲೆಂಡ್‌ ವೆಬ್‌ಸೈಟ್‌

ಜೆರ್ಸಿಯ ಬಲ ತೋಳಿನಲ್ಲಿ ನಂದಿನಿ ಲಾಂಛನವನ್ನು ಹಾಕಲಾಗಿದೆ. ನಂದಿನಿ ಎಂದು ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಬರೆಯಲಾಗಿದೆ.

‘ನಂದಿನಿ ಜೊತೆ ಪಾಲುದಾರರಾಗಿದ್ದು ನಮಗೆ ಸಂತೋಷ ಉಂಟು ಮಾಡಿದೆ. ನಮ್ಮ ಪುರುಷರ ಕ್ರಿಕೆಟ್ ತಂಡಕ್ಕೆ ಸ್ಥಾಪಿತವಾದ ಬ್ರ್ಯಾಂಡ್‌ ಬೆಂಬಲ ನೀಡುತ್ತಿರುವುದೇ ಅದ್ಭುತ. ಅವರ ಬ್ರ್ಯಾಂಡ್‌ ಹಾಗೂ ಸ್ಕಾಟ್ಲೆಂಡ್‌ ಕ್ರಿಕೆಟ್‌ ಅನ್ನು ಪ್ರಚಾರ ಪಡಿಸಲು ನಂದಿನಿ ಜೊತೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ. ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌, ನಮೀಬಿಯಾ, ಒಮಾನ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಆಡುವಾಗ ನಂದಿನಿ ಲಾಂಛನ ಜೊತೆಗೆ ಹೆಮ್ಮೆಯ ಸ್ಕಾಟ್ಲೆಂಡ್‌ ಬಣ್ಣಗಳೂ ಇರಲಿವೆ’ ಎಂದು ಕ್ರಿಕೆಟ್ ಸ್ಕಾಟ್ಲೆಂಡ್‌ನ ವಾಣಿಜ್ಯ ಕಾರ್ಯನಿರ್ವಾಹಕ ಕ್ಲಾರ್‌ ಡ್ರುಮಂಡ್ ಹೇಳಿದ್ದಾರೆ.

‘ಟಿ–20 ಅಭಿಯಾನದಲ್ಲಿ ಸ್ಕಾಟ್ಲೆಂಡ್‌ ಜೊತೆ ಪಾಲುದಾರಿಕೆ ಹೊಂದಿದ್ದು ನಮಗೆ ಸಂತೋಷವಾಗಿದೆ. ನಂದಿನಿಯು ಒಂದು ಬ್ರಾಂಡ್ ಆಗಿ ಶ್ರೇಷ್ಠತೆ ಮತ್ತು ಶುದ್ಧತೆಯನ್ನು ಪ್ರತಿನಿಧಿಸುತ್ತದೆ. ಕಳೆದ ನಲವತ್ತು ವರ್ಷಗಳಲ್ಲಿ ನಾವು ಜಾಗತಿಕ ಬ್ರಾಂಡ್ ಆಗಿ ಬೆಳೆದಿದ್ದೇವೆ’ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ ಜಗದೀಶ್‌ ಅವರ ಹೇಳಿಕೆಯನ್ನು ಕ್ರಿಕೆಟ್ ಸ್ಕಾಟ್ಲೆಂಡ್‌ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT