ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ–20 ವಿಶ್ವಕಪ್‌: ಸ್ಕಾಟ್ಲೆಂಡ್‌, ಐರ್ಲೆಂಡ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

Published 21 ಏಪ್ರಿಲ್ 2024, 9:23 IST
Last Updated 21 ಏಪ್ರಿಲ್ 2024, 9:23 IST
ಅಕ್ಷರ ಗಾತ್ರ

ಬೆಂಗಳೂರು: 2024ರ ಟಿ–20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾಗಿಯಾಗಲಿರುವ ಸ್ಕಾಟ್ಲೆಂಡ್‌ ಹಾಗೂ ಐರ್ಲೆಂಡ್‌ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ ವಹಿಸಲಿದೆ.

ಇದನ್ನು ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ ಜಗದೀಶ್‌ ಸ್ಪಷ್ಟಪಡಿಸಿದ್ದಾರೆ.

‘ಹೌದು, ನಾವು ಅವರಿಗೆ ಪ್ರಾಯೋಜಕತ್ವ ವಹಿಸಲಿದ್ದೇವೆ. ಪಂದ್ಯದ ವೇಳೆ ಅವರು ನಮ್ಮ ಬ್ರ್ಯಾಂಡ್‌ ಅನ್ನು ಪ್ರದರ್ಶಿಸಲಿದ್ದಾರೆ’ ಎಂದು ಕೆ.ಎಂ ಜಗದೀಶ್‌ ಭಾನುವಾರ ಪಿಟಿಐಗೆ ತಿಳಿಸಿದ್ದಾರೆ.

ನಂದಿನಿಯನ್ನು ಜಾಗತಿಕ ಬ್ರ್ಯಾಂಡ್‌ ಆಗಿ ಪ‍ರಿವರ್ತಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈಗಾಗಲೇ ನಮ್ಮ ಮಳಿಗೆಗಳು ಮಧ್ಯಪ್ರಾಚ್ಯದಲ್ಲಿ ಇವೆ. ಸಿಂಗಪುರದಲ್ಲೂ ನಮ್ಮ ಉತ್ಪನ್ನಗಳು ಲಭ್ಯವಿವೆ. ನಮ್ಮ ಸಿಹಿತಿಂಡಿಗಳು ಅಮೆರಿಕದಲ್ಲೂ ಮಾರಾಟವಾಗುತ್ತಿವೆ’ ಎಂದು ಹೇಳಿದರು.

ಕೆಎಂಎಫ್‌ನ ಈ ನಿರ್ಧಾರವನ್ನು ಇನ್ಫೋಸಿನ್‌ನ ಮುಖ್ಯ ಹಣಕಾಸು ಅಧಿಕಾರಿ ಟಿ.ವಿ ಮೋಹನದಾಸ್‌ ಪೈ ಅವರು ಟೀಕಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಇದು ನಾಚಿಗೆಯ ಸಂಗತಿ. ಕರ್ನಾಟಕದ ರೈತರು ಹಾಗೂ ಕನ್ನಡಿಗ ಗ್ರಾಹಕರು ಪಾವತಿಸಿದ ಹಣವನ್ನು ವಿದೇಶಿ ತಂಡಗಳ ಪ್ರಾಯೋಜಕತ್ವಕ್ಕೆ ಏಕೆ ಬಳಸಲಾಗುತ್ತಿದೆ? ಅದು ಯಾವ ಮೌಲ್ಯವನ್ನು ತೋರಿಸುತ್ತದೆ? ಬಡ ರೈತರಿಗೆ ಅದನ್ನು ಪಾವತಿಸಿ. ಇದು ಕರ್ನಾಟಕದ ಸಹಕಾರಿ ಸಂಸ್ಥೆಗೆ ವ್ಯರ್ಥ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಜಗದೀಶ್, ‘ನಮ್ಮ ಶೇ 85ರಷ್ಟು ಆದಾಯ ರೈತರಿಗೇ ಹೋಗುತ್ತದೆ. ನಮ್ಮ ಉತ್ಪನ್ನಗಳ ಪ್ರಚಾರಕ್ಕೆ ನಾವು ಪ್ರಾಯೋಜಕತ್ವ ವಹಿಸುತ್ತಿದ್ದೇವೆ. ನಾವು ಜಾಗತಿಕವಾಗಿ ಹೋಗಬೇಕಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT