ಸಾಹಿತ್ಯ ಸಮ್ಮೇಳನದಲ್ಲಿ ರಾಜಕಾರಣಿಗಳ ಮೇಲುಗೈ

7
ಡಾ.ಕೆ.ದುರ್ಗಾದಾಸ್‌

ಸಾಹಿತ್ಯ ಸಮ್ಮೇಳನದಲ್ಲಿ ರಾಜಕಾರಣಿಗಳ ಮೇಲುಗೈ

Published:
Updated:
Deccan Herald

ಶ್ರೀರಂಗಪಟ್ಟಣ: ‘ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾಲ್ಕಾಣೆಯಷ್ಟು ಮಾತ್ರ ಸಾಹಿತಿಗಳು ಪಾಲ್ಗೊಳ್ಳುತ್ತಿದ್ದು, ಹನ್ನೆರಡಾಣೆಯಷ್ಟು ರಾಜಕಾರಣಿಗಳು ಇರುತ್ತಾರೆ’ ಎಂದು ಮೈಸೂರಿನ ಶಾಸ್ತ್ರೀಯ ಅತ್ಯುನ್ನತ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಕೆ.ದುರ್ಗಾದಾಸ್‌ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ನಡೆದ ತಾಲ್ಲೂಕುಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

‘ರಾಜಕಾರಣಿಗಳ ಪ್ರಭಾವ ಹೆಚ್ಚಾದರೆ ಸಮ್ಮೇಳನಗಳು ಯಶಸ್ವಿಯಾಗುವುದಿಲ್ಲ. ಫೋಟೊ, ವಿಡಿಯೊಗಳಿಗೆ ಆದ್ಯತೆ ಹೆಚ್ಚುತ್ತದೆ. ಸನ್ಮಾನ ಸಂಸ್ಕೃತಿಗೆ ಕಾರಣವಾಗುತ್ತದೆ. ಸಾಹಿತ್ಯ ಸಮ್ಮೇಳನ ಕೇವಲ ವಿದ್ಯಾವಂತರ ಕಾರ್ಯಕ್ರಮವಾಗದೇ ಜನಪದರೂ ಪಾಲ್ಗೊಳ್ಳಬೇಕು. ಹಳ್ಳಿ ಜನರು ಕತೆ, ಕವನ, ನಾಟಕ ಕಟ್ಟುವ ಕಲೆ ಅನುಪಮವಾದುದು. ಬಯಲಾಟ, ಯಕ್ಷಗಾನಗಳು ಸಮ್ಮೇಳನಕ್ಕೆ ಮೆರಗು ನೀಡುತ್ತವೆ’ ಎಂದರು.

ಸಾಹಿತ್ಯ ಇಲ್ಲದೇ ಬದುಕಿಲ್ಲ. ಶಿಷ್ಟ ಅಥವಾ ಜನಪದ ಸಾಹಿತ್ಯ ಪ್ರತಿಯೊಬ್ಬರ ಬದುಕಿನಲ್ಲಿ ಹಾಸುಹೊಕ್ಕಾಗಿದೆ’ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಡಾ.ಸುಜಯಕುಮಾರ್‌ ಹೇಳಿದರು.

ಸಮಾರೋಪದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ತಾಲ್ಲೂಕುಮಟ್ಟದ ಸಮ್ಮೇಳನಗಳಲ್ಲಿ ಮುಖ್ಯ ನಿರ್ಣಯಗಳನ್ನು ಕೈಗೊಳ್ಳುವುದು ಕಷ್ಟ. ಆದರೆ ಸಮ್ಮೇಳನದ ಆಶಯಗಳನ್ನು ಸಂಬಂಧಿಸಿದವರಿಗೆ ಮನನ ಮಾಡಿಕೊಡಬೇಕು’ ಎಂದು ಅವರು ಸಲಹೆ ನೀಡಿದರು.

ಶಿಕ್ಷಣ ತಜ್ಞ ಎನ್‌.ಕೆ. ನಂಜಪ್ಪಗೌಡ ಇದ್ದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ್‌ ಚಾಮಲಾಪುರ ಸಮ್ಮೇಳನದ ಅಧ್ಯಕ್ಷರನ್ನು ಸನ್ಮಾನಿಸಿದರು. ಕಸಾಪ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷರಾದ ಬಿ.ಪ್ರೇಮಕುಮಾರ್‌, ಎಸ್‌.ಲಿಂಗಣ್ಣ, ಸಿ.ಪುಟ್ಟಸ್ವಾಮಿ, ಬಲ್ಲೇನಹಳ್ಳಿ ಶಂಕರ್‌, ನವಿಲುಮಾರನಹಳ್ಳಿ ತಿಮ್ಮೇಗೌಡ, ಎ.ಸೋಮಶೇಖರ್‌, ಪಿ.ಡಿ. ತಿಮ್ಮಪ್ಪ, ಪುರುಷೋತ್ತಮ ಚಿಕ್ಕಪಾಳ್ಯ, ಸಿದ್ದಲಿಂಗು ಅವರನ್ನು ಸನ್ಮಾನಿಸಲಾಯಿತು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ಸುರೇಂದ್ರ, ಗೌರವಾಧ್ಯಕ್ಷ ಮುಕುಂದ, ಉಪಾಧ್ಯಕ್ಷರಾದ ಎಂ.ಬಿ.ಕುಮಾರ್‌, ಸಿ.ಸ್ವಾಮಿಗೌಡ, ಗೌರವ ಕಾರ್ಯದರ್ಶಿ ಗೌರಿಶಂಕರಮೂರ್ತಿ, ಕೋಶಾಧ್ಯಕ್ಷ ಎಚ್‌.ಟಿ. ರಾಜಶೇಖರ್‌, ಜಿಲ್ಲಾ ಘಟಕದ ಗೌರವ ಕೋಶಾಧ್ಯಕ್ಷ ಪ್ರೊ. ಶಿವರಾಮು, ಕೆ.ಬಿ. ಬಸವರಾಜು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !